ಹನಿಗಳು ಸಾರ್, ಹನಿಗಳು!

Posted: ಅಕ್ಟೋಬರ್ 14, 2010 in ಹನಿಗಳು...
ಟ್ಯಾಗ್ ಗಳು:, , , , , ,

ಪಶ್ಚಾತ್ತಾಪವೊಂದು ಹೀಗೆ

ನನ್ನ ಬಿಡದೇ ಬೆಂಬತ್ತಿದುದರಿಂದ

ನಾನು ತಪ್ಪು ಮಾಡಿದ್ದೇ ಹೌದು

ಅಂತ ನಂಬಿಕೆ ಆಗುತ್ತಿದೆ

*******

38-abstract-art-feng-shui-painting-2

ಆ ಸಂಜೆ ರೂಮಿಗೆ ಬಂದಾಗ

ಅಲ್ಲಿ ಕತ್ತಲು ಧಗಧಗನೆ

ಹೊತ್ತಿ ಉರಿಯುತಿತ್ತು

ಮೊಂಬತ್ತಿ ಹತ್ತಿಸಿ

ಎಲ್ಲಾ ನಂದಿಸಿದೆ.

*********

ಬದುಕಿನ ಈ ಘಟ್ಟದಲ್ಲಿ

ನಿಂತು ಹಿಂತಿರುಗಿ ನೋಡಿದರೆ

ಬೇಡ

ಬೇಕಾದ ಅದೆಷ್ಟೋ

ಕ್ಷಮೆಗಳ ಸಾಲವಿದೆ

*******

441

ಆಕೆ ನನ್ನ ಬಿಟ್ಟುಹೋದ ದಿನ

ಅವಳಮ್ಮ ಸಂಜೆ ತಿಂಡಿಗೆ

ಕಟ್ಲೇಟು ಮಾಡಿದ್ದರಂತೆ

ಆಕೆ ಅದರ

ಹೃದಯದಾಕಾರಕ್ಕೆ

ಬೆಚ್ಚಿಬಿದ್ದು ತಿನ್ನಲಿಲ್ಲ,

*******

ಭಾವಗಳ ಮೋಡ ಮನಸಿನಾಗಸ ತುಂಬಾ ಆವರಿಸಿದೆ….

ದೊರಕುತಿದೆ ಪ್ರೀತಿಯ ಜಡಿಮಳೆಯಾಗುವ ಮುನ್ಸೂಚನೆ..

ಕವಿತೆಗಳಾಗುವ ಪದಗಳು ಎದೆಯ ಬಾಗಿಲಲ್ಲೇ ತಡವರಿಸಿದೆ..

ಇದು ಯಾವ ವೈದ್ಯನಿಗೂ ಅರ್ಥವಾಗದ ಸುಮಧುರ ಯಾತನೆ!

 

****

ಇದು “ನೀಲಿ ಹೂವು”  ಬ್ಲಾಗಿನ ನೂರೈವತ್ತನೇ ಪೋಸ್ಟು!

******

photo (painting) from this and  this website

ಟಿಪ್ಪಣಿಗಳು
 1. ಚಾಮರಾಜ ಸವಡಿ ಹೇಳುತ್ತಾರೆ:

  Again Ranjith is at his best. ತುಂಬಾ ಚೆನ್ನಾಗಿ ಬರೆದಿದ್ದೀರಿ ರಂಜಿತ್‌.

  ಭಾವಗಳ ಮೋಡ ಮನಸಿನಾಗಸ ತುಂಬಾ ಆವರಿಸಿದೆ….

  ದೊರಕುತಿದೆ ಪ್ರೀತಿಯ ಜಡಿಮಳೆಯಾಗುವ ಮುನ್ಸೂಚನೆ..

  ಕವಿತೆಗಳಾಗುವ ಪದಗಳು ಎದೆಯ ಬಾಗಿಲಲ್ಲೇ ತಡವರಿಸಿದೆ..

  ಇದು ಯಾವ ವೈದ್ಯನಿಗೂ ಅರ್ಥವಾಗದ ಸುಮಧುರ ಯಾತನೆ!

  ಅದ್ಭುತ. ಹೀಗೇ ಬರೆಯುತ್ತಿರಿ. ಸುನೀತ ಭಾವನೆಗಳು ಕಳೆದೇಹೋದವು ಎಂಬ ನನ್ನಂಥವರ ತಳಮಳ ಆಗಾಗ ಕಡಿಮೆಯಾಗುತ್ತಿರಲಿ.

  – ಚಾಮರಾಜ ಸವಡಿ

 2. ಅನಾಮಿಕ ಹೇಳುತ್ತಾರೆ:

  ಚನ್ನಾಗಿವೆ……….

 3. ಅನಾಮಿಕ ಹೇಳುತ್ತಾರೆ:

  very nice.

 4. Pradeep ಹೇಳುತ್ತಾರೆ:

  ಡೈರೆಕ್ಟ್ ಹಾರ್ಟ್ ಗೆ ಕೈ ಹಾಕ್ತೀರಾ ಕಣ್ರೀ ನೀವು !!!
  ಹೀಗೆ ಮುಂದುವರಿಯಲಿ ….

 5. venkatakrishna.k.k. ಹೇಳುತ್ತಾರೆ:

  ಕೊನೆಯ ಪ್ಯಾರಾ ತುಂಬಾ ಹಿಡಿಸಿತು..
  ಸುಂದರ ಕವನ..

 6. Dr. Azad ಹೇಳುತ್ತಾರೆ:

  ಆ ಸಂಜೆ ರೂಮಿಗೆ ಬಂದಾಗ

  ಅಲ್ಲಿ ಕತ್ತಲು ಧಗಧಗನೆ

  ಹೊತ್ತಿ ಉರಿಯುತಿತ್ತು

  ಮೊಂಬತ್ತಿ ಹತ್ತಿಸಿ

  ಎಲ್ಲಾ ನಂದಿಸಿದೆ.

  ನೀಲಿ ಹೂವಿನ..ಕಲ್ಪನೆಯ ಅತಿಶಯ ಈ ಸಾಲುಗಳು ಬಹಳ ಚನ್ನಾಗಿವೆ…ಕೀಪ್ ಇಟ್ ಅಪ್…

 7. Dr.Gurumurthy hegde ಹೇಳುತ್ತಾರೆ:

  ತುಂಬಾ ಸುಂದರ ಕವಿತೆ

  ಮೊದಲ ಪ್ಯಾರ ತುಂಬಾ ಹಿಡಿಸಿತು

  ೧೫೦ ನೆ ಪೋಸ್ಟ್ ಗೆ ಅಭಿನಂದನೆ

 8. ಅನಾಮಿಕ ಹೇಳುತ್ತಾರೆ:

  superrrrrrrrrrrrrrrrrrrr

 9. balu ಹೇಳುತ್ತಾರೆ:

  ಭಾವಗಳ ಮೋಡ ಮನಸಿನಾಗಸ ತುಂಬಾ ಆವರಿಸಿದೆ….

  ದೊರಕುತಿದೆ ಪ್ರೀತಿಯ ಜಡಿಮಳೆಯಾಗುವ ಮುನ್ಸೂಚನೆ..

  ಕವಿತೆಗಳಾಗುವ ಪದಗಳು ಎದೆಯ ಬಾಗಿಲಲ್ಲೇ ತಡವರಿಸಿದೆ..

  ಇದು ಯಾವ ವೈದ್ಯನಿಗೂ ಅರ್ಥವಾಗದ ಸುಮಧುರ ಯಾತನೆ! ಇಷ್ಟವಾದ ಸಾಲುಗಳು.

  ಕವಿತೆ ಚೆನ್ನಾಗಿದೆ.

 10. Sunil Kumar KM ಹೇಳುತ್ತಾರೆ:

  ರಂಜಿತ್,
  ನೂರೈವತ್ತನೇ ಪೋಸ್ಟಿಗೆ ನೂರು ಸಲಾಂ 😉
  ತುಂಬಾ ತೇವವಾದ ಸಾಲುಗಳು ಗೆಳೆಯ..ಮನ ತಟ್ಟಿವೆ ನಿಜಕ್ಕೂ…
  ನಿರಂತರವಾಗಿ ಮುಂದುವರಿಯಲಿ ಭಾವಯಾನ…..
  ಪ್ರೀತಿಯಿಂದ,
  ಸುನಿಲ್.

 11. ರಂಜಿತ್ ಹೇಳುತ್ತಾರೆ:

  ಚಾಮರಾಜ ಸವಡಿ,

  ಥ್ಯಾಂಕ್ಸು, ಭಾವಗಳೂ ಎಲ್ಲೆಡೆಯಿರುತ್ತದೆ, ಬೆಳಕು ತೋರುವ ಪದ ಸಿಗಬೇಕು, ಅದರಲಿ ತೂಗಿ ನಲಿಯುವ ಮುದ ಇರಬೇಕು.. ಧನ್ಯವಾದಗಳು.

  ಅನಾನಿಮಸ್, ಥ್ಯಾಂಕ್ಸ್.

  ಪ್ರದೀಪ್, ಮೆದುಳಿಗೆ ಕೈ ಹಾಕೋದಕ್ಕಿಂತ ಇದೇ ಬೆಟರ್ರು ಅಲ್ವೇ?:)

  ವೆಂಕಟಕೃಷ್ಣ, ಡಾ! ಆಜಾದ್, ಗುರುಮೂರ್ತಿ ಸರ್,

  ಧನ್ಯವಾದಗಳು.

  ಬಾಲು, ಸುನೀಲ್

  ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s