ವ್ಯಾಪಾರಸ್ಥ!

Posted: ನವೆಂಬರ್ 2, 2010 in ಕವಿತೆ, ಕವಿತೆ ತರಹ
ಟ್ಯಾಗ್ ಗಳು:, , , , ,

 

ಕಳೆದುಕೊಳ್ಳುವ ಭಯದಲ್ಲಿ
ಅಡಗಿಸಿಟ್ಟ ಕೋಟಿ ಮಾತುಗಳಿವೆ
ಎದೆಯೊಳಗೆ

ಕಳೆದುಕೊಂಡಷ್ಟೂ
ಚೂರುಪಾರು ಉಳಿದುಕೊಳ್ಳುವಷ್ಟು
ಇದ್ದೇನೆ ನನ್ನೊಳಗೆ ನಾನು
images (1)

ನನ್ನ ನಾನೇ ಸ್ವಲ್ಪ ಸ್ವಲ್ಪವಾಗಿ
ಉರಿಸಿಕೊಳ್ಳುತ್ತಾ
ಬೆಳಕ ಪಡೆಯಬಯಸುತ್ತೇನೆ ಕೆಲವೊಮ್ಮೆ

ಹೇಳಿಕೊಳ್ಳಲಾಗದೇ ಸಂಬಂಧಗಳನ್ನು
ಕೈಬಿಟ್ಟುಕೊಂಡ ಜಗತ್ತಿನ ಜನರ
ನಿಟ್ಟುಸಿರಷ್ಟೇ ಭಾರವಾಗುತ್ತೇನೆ

ಹೃದಯ ಹತ್ತಿರವಿದ್ದಿದ್ದರೆ ಜೋಡಿಸಿಕೊಳ್ಳಬಹುದಿತ್ತು
ನೇವರಿಸಿ ದುಃಖವನ್ನೆಲ್ಲಾ ನನ್ನೊಳಗೆ ಸೇರಿಸಿಕೊಳ್ಳಬಹುದಿತ್ತು

ಇಲ್ಲವಾದ್ದರಿಂದಲೇ ಹೀಗೆ
ಪದಗಳ ಮೂಲಕ ಪ್ರೀತಿಯ ವ್ಯಾಪಾರ ಮಾಡಿ
ಖುಷಿಯಿಂದ ಸೋಲುತ್ತಿದ್ದೇನೆ..

 

******

ಚಿತ್ರಕೃಪೆ: ಈ ಬ್ಲಾಗು

ಟಿಪ್ಪಣಿಗಳು
 1. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಅದ್ಭುತ ಸಾಲುಗಳು ರಂಜಿತ್… ಪ್ರತಿಯೊಂದು ಸಾಲುಗಳೂ ಇಷ್ಟವಾದವು 🙂

 2. Sunil Kumar KM ಹೇಳುತ್ತಾರೆ:

  ತುಂಬಾ ಚೆಂದದ ಪದ್ಯ ರಂಜಿತ್……
  ಚಿತ್ರ ಕೂಡ ಸೂಕ್ತವಾಗಿದೆ…..
  ಅಭಿನಂದನೆಗಳು.

 3. roopasatish1@gmail.com ಹೇಳುತ್ತಾರೆ:

  Hi Ranjit,
  Tumbaa dinagaLa nanthara nimma blog-ge bhEti maadide. Idenidu ellavu virahatumbide kavanagaLe!! Omme odi bandare,I will be in trans, gantaLinolage uguLu nunguvudoo saha kashtavaagutte.
  Well, ellaa kavanagaLoo tumbaa bhaava poorna. Nimma kavanagaLa speciality-ne adu, simpleaada padagaLanna baLasi teera aaLavaagi mudrisuva shaili… I like it a lot.
  Sometimes, orkut na 3K community saha visit maaDi, samayamaaDikondu.

 4. ರಂಜಿತ್ ಹೇಳುತ್ತಾರೆ:

  ಶರಶ್,

  ಥ್ಯಾಂಕ್ಸ್.

  ಸುನಿಲ್ , ಚಿತ್ರ ನನ್ನದಲ್ಲ… ಸೂಕ್ತವೆನಿದ್ದು ಬೇಕಾದಾಗ ಸಿಕ್ಕಿದ್ದು ನನ್ನ ಅದೃಷ್ಟ..:)

  ರೂಪ ಮೇಡಮ್,

  ಆಗಾಗ್ಗೆ ಬರುತ್ತಿರಿ, ಮೆಚ್ಚುಗೆಯೋ, ವಿಮರ್ಶೆಯೋ ನಮಗೆ ಅದೇ ಇಂಧನ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s