ಸೋತ ಅಪ್ಪ..!

Posted: ಡಿಸೆಂಬರ್ 10, 2010 in ಕವಿತೆ, ಕವಿತೆ ತರಹ
ಟ್ಯಾಗ್ ಗಳು:, , , ,

ಹಾಗೆ ಹೊರಟಾಗೆಲ್ಲಾ

ಸಿಕ್ಕವರು ನಕ್ಕವರು

ಗೌರವ ಕೊಟ್ಟವರು

ನಿಮ್ ಮಗಾ ಏನ್ರೀ

ಪಕ್ಕಾ ನಿಮ್ದೇ ಮುಖ ಹೊತ್ತಿದಾನೆ

ಎಂದಾಗ ಅದೇನೋ ಹೆಮ್ಮೆ ಅಪ್ಪನಿಗೆ,

2674328589_5bf62dfd93

ಈಗ ಅದ ನೆನೆನೆನೆದು

ನನಗೆ ತುಂಬು ಕೀಳರಿಮೆ

 

ದುಬಾರಿ ಆಟದಸಾಮಾನು

ಕೇಳಿದ್ದಾಗ ಅವನ ಮೊಗ

ದಲ್ಲಿ ಹಣಹೊತ್ತ ಭಾರವಿರಲಿಲ್ಲ,

ಈಗ ನನಗಿರುವ ಹಾಗೆ.

_images_scale_scaleimg_475_495_N_0__2F_images_2F_origs_2F_663_2F_penthouse_view___father___son

ಮಗ ಕಡಿಮೆ ಮಾರ್ಕ್ಸು ತಂದಾಗ

ತಾನೇ ಸೋತಂತೆ ಅವನಿರಲಿಲ್ಲ

ಈಗ ನನ್ನ ಮನವಿರುವ ಹಾಗೆ

 

ಮಾತಿಗೆ ಎದುರಾಡಿದಾಗ

ಒಳಗಾದ ನೋವನು ತೋರಗೊಡದೇ

ಗೆಳೆಯನಂತೆ ಬದಲಾದಾಗ

ಸರಿದಾರಿಗೆ ಬಂದಿದ್ದು ನೆನಪು

ಅದಕ್ಕೆ ಅವ ಉಪಯೋಗಿಸಿದ ಉಪಾಯ

ಅರಿಯದೇ ನಾನೀಗ

ಒಬ್ಬ ಸೋತ ಅಪ್ಪ.

 

ನಿಜ,

ಒಳ್ಳೇ ಮಗನಾಗುವುದೇ

ಸುಲಭ,

ಒಳ್ಳೇ ಅಪ್ಪನಾಗುವುದಲ್ಲ.

 

 

(ಚಿತ್ರಕೃಪೆ : ಇಲ್ಲಿಂದ)

Advertisements
ಟಿಪ್ಪಣಿಗಳು
 1. ಚಾಮರಾಜ ಸವಡಿ ಹೇಳುತ್ತಾರೆ:

  ಸಿಂಪ್ಲಿ ಸೂಪರ್‌ ರಂಜಿತ್‌. ಅತ್ಯಂತ ಸೊಗಸಾದ ಗಮನಿಸುವಿಕೆ. ನಿಜ, ನಾವೆಲ್ಲ ಸೋತ ಅಪ್ಪಂದಿರು. ನಿಮ್ಮ ಕವಿತೆಯ ಕೊನೆಯ ಸಾಲುಗಳು ನಿಜಕ್ಕೂ ಮನಮುಟ್ಟುವಂಥವು. ನಾವು ಒಳ್ಳೆ ಮಕ್ಕಳು. ಆದರೆ, ಒಳ್ಳೆಯ ತಂದೆಯಾಗುವುದು ನಮಗೆ ನಿಜಕ್ಕೂ ಕಷ್ಟವಾಗುತ್ತಿದೆ.

  ಚಿಂತನೆಗೆ ಹಚ್ಚುತ್ತಿವೆ ಈ ಸಾಲುಗಳು.

 2. Dr.Gurumurthy Hegde ಹೇಳುತ್ತಾರೆ:

  Touching

  tumbane bhaavuka aagide

 3. supreeth ಹೇಳುತ್ತಾರೆ:

  ಸೋತಿರೋ ಗೆದ್ದಿರೋ ಅದು ಪಕ್ಕಕ್ಕಿರಲಿ, ನೀವು ಅಪ್ಪ ಆದದ್ದು ಯಾವಾಗ ಅದನ್ನು ತಿಳಿಸಿ 🙂

 4. ಶ್ಯಾಮಲಜನಾರ್ದನನ್ ಹೇಳುತ್ತಾರೆ:

  ರಂಜಿತ್….
  ಮಕ್ಕಳು ಬೆಳೆಯುತ್ತಲೇ… ನಾವೂ ಅವರ ಜತೆ ಬೆಳೆಯುತ್ತೇವೆ. ಜೀವನದಲ್ಲೇ ಮೊದಲ ಬಾರಿಗೆ ತಾಯಿ-ತಂದೆಯರ ಪಾತ್ರ ಮಾಡುತ್ತಿರುತ್ತೇವೆ. ಆದ್ದರಿಂದ ಕಲಿಕೆ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ನಮ್ಮ ತಂದೆ-ತಾಯಿಯರು ನಮ್ಮ ಜೊತೆ ವ್ಯವಹರಿಸಿದ ರೀತಿಯಲ್ಲಿ, ನಾವೀಗ ನಮ್ಮ ಮಕ್ಕಳ ಜೊತೆ ವ್ಯವಹರಿಸಲಾಗುವುದಿಲ್ಲ. ಕಾಲ ಬದಲಾಗಿದೆ. ನನಗನ್ನಿಸುತ್ತೆ ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಮಕ್ಕಳು ಬೆಳೆದಂತೆ ನಾವು ಅವರಿಗೆ ಒಳ್ಳೆಯ ಸ್ನೇಹಿತರಾಗಿ ಬಿಡುವುದೇ ಮುಖ್ಯ. ನಿಮ್ಮ ಮಾತುಗಳ ಹಿಂದಿನ ಕಾಳಜಿ, ಭಾವ ನನಗೆ ತುಂಬಾ ಇಷ್ಟವಾಯಿತು… ಚೆನ್ನಾಗಿದೆ.

  ಶ್ಯಾಮಲ

 5. ರಂಜಿತ್ ಹೇಳುತ್ತಾರೆ:

  ಚಾಮರಾಜ ಸವಡಿ, ಗುರುಮೂರ್ತಿ ಹೆಗ್ಡೆ

  ಥ್ಯಾಂಕ್ಸ್.

  ಸುಪ್ರೀತ್,

  🙂

  ಶ್ಯಾಮಲಾ ಮೇಡಮ್,

  ನಿಜ, ಆದರೂ ಸ್ನೇಹಿತನಂತೆ ನಡೆದುಕೊಳ್ಳುತ್ತಾ ಹಾದಿತಪ್ಪದಂತೆ ನಿರ್ದೇಶಿಸುವ ಕಲೆ, ಹಣ-ಖುಷಿಯನ್ನು ಜತೆಗೇ ಬ್ಯಾಲೆನ್ಸ್ ಮಾಡುವ ಕುಶಲತೆ… ಒಟ್ಟಿನಲ್ಲಿ ಅಪ್ಪ ನನಗೆ ಒಳ್ಳೇ ಮಗನಾಗುವುದನು ಹೇಳಿಕೊಟ್ಟ, ಒಳ್ಳೇ ಅಪ್ಪನಾಗುವ ವಿದ್ಯೆಯನಲ್ಲ ಅನ್ನುವ ಬೇಸರ ನನ್ನದು..

  ನಿಮ್ಮ ಅನಿಸಿಕೆಗೆ ಧನ್ಯವಾದಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s