ಕಳಚಿಟ್ಟ ಕ್ಯಾಲೆಂಡರು!

Posted: ಜನವರಿ 1, 2011 in ಕವಿತೆ, ಕವಿತೆ ತರಹ

ಇದ್ದ ಚೌಕುಳಿಗಳ ತುಂಬಾ
ಸೈನ್ಯವನು ಸರಸರನೆ ನಡೆಸಿ
ಕೆಲವೊಮ್ಮೆ ಗೆದ್ದ
ಮತ್ತೆ ಕೆಲಸಲ ಸೋತ
ಹೆಜ್ಜೆಗುರುತುಗಳು

ಹಾಲಿನವ ಬರದ
ದಿನದ ಗುರುತು,
ಚಿಕ್ಕಮ್ಮನ ಹುಟ್ಟುಹಬ್ಬ
ನೆನಪಿಸಲು ಎಳೆದ ಕಾಟು
ಸಂಕಷ್ಟ ಚತುರ್ಥಿ ಉಪವಾಸ
ನೆನಪಿಸುವ ಹೈಲೈಟು
ತಿಂಗಳ ತುಂಬಾ ಅಮ್ಮ ಬರೆದ
ಕಾಗೆಕಾಲು ಗುಬ್ಬಿಕಾಲು

ಅಡಿಯಲ್ಲಿ ನಿಂತು
ಹಲ್ಲಿ ಹಾಕಿದ್ದ ಸ್ಕೆಚ್ಚು
ನವೆಂಬರ ಕೊನೆಯೆಡಕಿಯ
ಚೌಕಿಯಾಳದಿಂದ ಮಾಡಿದ ದಾಳಿಗೆ
ಹುಳು ಸಿಕ್ಕಿಬಿದ್ದಿತ್ತು

old calendar

ಗೋಡೆಗೆ ನೇಣುಹಾಕಿದ ಬದುಕಿನ
ಒಂದು ಸಂವತ್ಸರಕ್ಕೆ ಇಂದು ಬಿಡುಗಡೆ
ಪುಟ್ಟನ ಹೊಸಾ ನೋಟುಬುಕ್ಕಿಗೆ
ಅವಚಿಕೊಂಡರೇನೆ ಅದಕ್ಕೀಗ ಮುಕ್ತಿ.

ಹೊಸ ಕ್ಯಾಲೆಂಡರಿನ ಘಮಕ್ಕೆ
ಹೆಜ್ಜೆಯಿಡುವ ಹುರುಪು
ಸಂಕಲ್ಪಗಳ ಪಟ್ಟಿಯಿಂದ
ಮೂಡಿದ ಹುಮ್ಮಸ್ಸುಗಳೆಡೆಯಲಿ
ಸಿಲುಕಿದರೂ ಮನಸ್ಸಿಗೆ
ಇನ್ನೂ ನಿಲ್ಲದ ಗುಂಗು; ಹಳೆ ವರುಷದ್ದೇ ಒನಪು.

 

ಚಿತ್ರಕೃಪೆ: ಇಲ್ಲಿಂದ

(ಓದುಗರು, ಗೆಳೆಯರೆಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷಕ್ಕೆ ಶುಭಾಶಯಗಳು!)

Advertisements
ಟಿಪ್ಪಣಿಗಳು
 1. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ರಂಜಿತ್,
  ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🙂
  “ಗೋಡೆಗೆ ನೇಣುಹಾಕಿದ ಬದುಕಿನ
  ಒಂದು ಸಂವತ್ಸರಕ್ಕೆ ಇಂದು ಬಿಡುಗಡೆ
  ಪುಟ್ಟನ ಹೊಸಾ ನೋಟುಬುಕ್ಕಿಗೆ
  ಅವಚಿಕೊಂಡರೇನೆ ಅದಕ್ಕೀಗ ಮುಕ್ತಿ”

  ತುಂಬಾ ಇಷ್ಟವಾದವು ಈ ಸಾಲುಗಳು 🙂

 2. shivu.k ಹೇಳುತ್ತಾರೆ:

  ಸರ್,

  ಹೊಸ ವರ್ಷಕ್ಕೆ ಹೊಸ ಕಳಚಿಟ್ಟ ಕ್ಯಾಲೆಂಡರ್ ಕವನ ತುಂಬಾ ಚೆನ್ನಾಗಿದೆ. ನಿಮಗೂ ಹೊಸ ವರ್ಷದ ಶುಭಾಶಯಗಳು.

 3. shamala ಹೇಳುತ್ತಾರೆ:

  ರಂಜಿತ್..
  ಹೊಸ ವರ್ಷದ ಶುಭಾಶಯಗಳು. ಗೋಡೆಗೆ ನೇಣು ಹಾಕಿದ್ದ ಕ್ಯಾಲೆಂಡರಿನಂತೆಯೇ… ನಮ್ಮ ಬದುಕಿನ ಒಂದು ಸಂವತ್ಸರವೂ ಕಳಚಿದೆ. ನಾವು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದೇವೆ.. ಈ ಜಂಜಟಗಳ ಸರಮಾಲೆಯ ಬದುಕಿನ ಅವಲೋಕನ ಮಾಡಬೇಕೇ.. ಬೇಡವೇ ಎನ್ನುವ ಜಿಜ್ಞಾಸೆಯೇ ಇನ್ನೂ ಮುಗಿಯುವಂತೆ ಕಾಣಲಿಲ್ಲ. ಪುಟ್ಟನ ನೋಟ್ ಬುಕ್ಕನ್ನು ಅವಚಿದರೆ.. ಕ್ಯಾಲೆಂಡರಿಗೇನೋ ಮುಕ್ತಿ.. ಆದರೆ ಕಳಚಿದ ನಮ್ಮ ಬದುಕಿನ ಒಂದು ಸಂವತ್ಸರಕ್ಕೆಲ್ಲಿಯ ಮುಕ್ತಿ ಅಲ್ವಾ..? ತುಂಬಾ ಚೆನ್ನಾಗಿದೆ ರಂಜಿತ್… ನಂಗಿಷ್ಟವಾಯ್ತು.. ಎಷ್ಟೊಂದು ವಿಚಾರ ಅಡಗಿದೆ ಇದರಲ್ಲಿ ಅನ್ನಿಸ್ತು.. ಧನ್ಯವಾದಗಳು…

  ಶ್ಯಾಮಲ

 4. ರಂಜಿತ್ ಹೇಳುತ್ತಾರೆ:

  ಶರಶ್, ನಿಮಗೂ ಹೊಸ ವರ್ಷ ಹೊಸ ಹರ್ಶ, ಮುಂದಿನ ಹಿಂದಿನ ಎಲ್ಲಾ ವರುಷಗಳಿಗೆ ಆದರ್ಶಪ್ರಾಯವಾದ ವರುಷವಾಗಲಿ ಹಾರೈಸುವೆ.

  ವೆಂಕಟ್ರಮಣ ಭಟ್, ಮಯೂರದಲ್ಲಿ ಬಂದ ನಿಮ್ಮ ಕವಿತೆಗಳು ಚೆನ್ನಾಗಿದ್ವು, ನಿಮ್ಮ ಈ ಅನಿಸಿಕೆಗೆ ಥ್ಯಾಂಕ್ಸ್.

  ಶಿವು, ನಿಮಗೂ ಹೊಸ ವರ್ಷದ ಶುಭಾಶಯಗಳು, ಈ ವರ್ಷ ನಿಮ್ಮ ಇನ್ನೊಂದಿಷ್ಟು ಪುಸ್ತಕಗಳು ಬರಲಿ, ನಮ್ಮ ಒಳಗಣ್ಣುಗಳು ಅದನ್ನೋದಿ ಮತ್ತಷ್ಟು ತೆರೆಯಲಿ ಎಂಬ ಬಯಕೆ ನನ್ನದು.

  ಶ್ಯಾಮಲಾ, ಧನ್ಯವಾದಗಳು, ನಾವಿಡುವ ಪ್ರತಿ ಹೆಜ್ಜೆಯೂ ಮಜಬೂತಾಗಿರಲಿ ಎಂಬ ಪ್ರಾರ್ಥನೆ ಮತ್ತು ಪ್ರಯತ್ನಗಳಷ್ಟೇ ನಮಗೆ ಮುಕ್ತಿ ನೀಡಬಲ್ಲುದೇನೋ!:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s