ಮೂರು ಮತ್ತೊಂದು ಹನಿಗಳು..

Posted: ಜನವರಿ 22, 2011 in ಒಂದ್ಸಾಲಿನಲಿ ಕವಿತೆ!, ಹನಿಗಳು...
ಟ್ಯಾಗ್ ಗಳು:, , , ,

ಏಕಾಂತ

ನೆನಪಿನಾಳ

ಕ್ಕೆ

ಹಾಕಿ ಗಾಳ

ಹಳೆಯ ಮನದ ಗೀರೊಂದು

ಕೊಟ್ಟ ನೋವನ್ನು

ಮಧುರವಾಗಿ

ಹೀರುತ್ತಾ ಕೂರುವುದು.

******

ಕಾವ್ಯ

ಮೌನ, ರೇಷಿಮೆ ನಯ

ನೆನಪೋ ಸೂಜಿಮೊನೆ

ಘನ ಮನ

ಕಾದು ಕುಂತು

ನೇಯ್ದದ್ದು

ಕಾವ್ಯಕಸೂತಿ.

***

p8_albania050916

ಹನಿ

ಹಕ್ಕಿಯಂತೆ

ಹತ್ತಿಯಂತೆ ಹಾರಾಡಿ

ಬಾನಬಯಲಲಿ ತೇಲಾಡಿ

ಹುಡುಕಿ ಹುಡುಕಿ

ಅವಳ ನೆತ್ತಿಯ ಮೇಲುದುರಿ

ಜಾರುಬಂಡಿಯಾಡುವ

ಆಸೆ ಹೊತ್ತ

ಹನಿ

ಬಲು ಕಿಲಾಡಿ.

****

ಆಟ

ಕನಸಕೆರೆಗೆ

ಕಲ್ಲನೆಸೆದು

ನಿನಗೋ ಆಟವಾಡುವ ಲಹರಿ

ದಡದಮೂಲೆಯಲಿ

ಏಡಿಮನೆಮಾಡಿದ ಮನವಿರುವ

ನನಗೋ

ತೆರೆತೆರೆಯೂ ಸುನಾಮಿಯ ಪರಿ.

*****

 

(ಚಿತ್ರಕೃಪೆ)

ಟಿಪ್ಪಣಿಗಳು
 1. veekay ಹೇಳುತ್ತಾರೆ:

  Hi Ranjith bai,

  koneyaveradu kavithe super..
  modalinaveradu swalpa sappe sappe..

  keep writing please.

 2. ಅನಾಮಿಕ ಹೇಳುತ್ತಾರೆ:

  Superr Hanigalu!

 3. Kavita ಹೇಳುತ್ತಾರೆ:

  Superr Hanigalu!

 4. Tejaswini Hegde ಹೇಳುತ್ತಾರೆ:

  ಏಕಾಂತ & ಆಟ – liked very much

 5. valase Hakki ಹೇಳುತ್ತಾರೆ:

  ಹನಿಯ ಹನಿ ಇಷ್ಟವಾಯ್ತು 🙂

 6. Sunil Kumar KM ಹೇಳುತ್ತಾರೆ:

  Enappa heartige kai haakteera 😉

 7. ರಂಜಿತ್ ಹೇಳುತ್ತಾರೆ:

  ವೀಕೇ,

  ಧನ್ಯವಾದಗಳು ಸರ್. ಸಪ್ಪೆಯಾಯ್ತೇ? ಮುಂದಿನ ಸಲ ರುಚಿ ಹೆಚ್ಚಿಸುವ ಯತ್ನ ಮಾಡ್ತೇನೆ!

  ಅನಾನಿಮಸ್, ಕವಿತಾ,

  ಥ್ಯಾಂಕ್ಯೂ.

  ವಲಸೆ ಹಕ್ಕಿ,

  ಅದನ್ನು ಕಿಲಾಡಿ ಹನಿಗವಿತೆ ಅನ್ನಬಹುದೇ?:), ಧನ್ಯವಾದಗಳು.

  ಸುನೀಲ್,

  ಮೆದುಳಿಗೆ ಕೈ ಹಾಕುವುದಕ್ಕಿಂತ ಬೆಟರ್ ಅಲ್ವೇ?:)

  ಕ್ರೆಡಿಟ್ಟು ತೆರೆದ ಹೃದಯದಿಂದ ಓದುವ ನಿಮ್ಮದೇ ಅನ್ನುವುದು ನನ್ನ ಅನಿಸಿಕೆ!

 8. veekay ಹೇಳುತ್ತಾರೆ:

  Hi Ranjith anna,

  naanu vayassinalli nimagintha chikkavanu ankotini 🙂
  actually sappe andiddara artha,avu neeve set maadida bench mark kinta kelage ive anta aste..
  aa benchmark annu munde innu hecchisutthiri emba baravase ide..

  preetiyinda
  veekay

 9. ರಂಜಿತ್ ಹೇಳುತ್ತಾರೆ:

  ವೀಕೆ, ಪರವಾಗಿಲ್ಲ.. ನಿಮ್ಮ ಅನಿಸಿಕೆ, ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಮುಖ್ಯವಾಗಿ ಬ್ಲಾಗ್ ಬರಹಗಳಿಗೆ ಈಗ ಬೇಕಾಗುವುದು ಇದೇ ಅಂತ ನನ್ನ ನಂಬುಗೆ. ಹೀಗೆ ಬರುತ್ತಿರಿ, ಬರೆಯುತ್ತಿರಿ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s