ಎದೆ ಸಿಗಿದು ಇಣುಕಿದರೆ

ಅಲ್ಲಿ ಕಾಣಸಿಗುವುದು

ನನ್ನದೇ ಅಮ್ಮ ಅಪ್ಪ ತಾತ ಅಜ್ಜಿ ಚಿಕ್ಕಿ

ಕಳೆದ ಗೆಳತಿ, ಕಾಲೆಳೆದ ಗೆಳೆಯ

ಕಾಲವಾದ ಮುತ್ತಜ್ಜ.

 

ನಿನ್ನ ನೀ ಹುಡುಕಿಕೋ ಎಂದು ದೊಡ್ಡ

ಜವಾಬ್ದಾರಿ ಇತ್ತ ಸಾಕ್ರಟೀಸ್

ಅಲ್ಪ ಸ್ವಲ್ಪ ಭಗತ್ ಸಿಂಗು ದೇಶಕ್ಕೆ

ಒಂಚೂರು ರಾಜ್ಕುಮಾರು ಕನ್ನಡಕ್ಕೆ

 

ಇನ್ನೂ ಸ್ವಲ್ಪ ಆಳದಲಿ

ನ್ಯೂಟನ್ನು, ಐನ್ ಸ್ಟೀನು, ವಿವೇಕಾನಂದ

ಗಾಂಧಿ,

ಎಲ್ಲೋ ಕತ್ತಲ ಕನಸು ಸಂತೆಯಲಿ ಬಾಂಡು

ಐಂದ್ರಿತಾ ಜತೆ ಸರಸ

ರೌಡಿಗಳನು ಸೆದೆಬಡಿವ ದರ್ಶನ್ನು

ಎಲ್ಲರೆದುರು ಸೊಬಗ ಸಂತ, ಏನೂ ಬಯಸದ ಮುನಿ

ನಮ್ಮನ್ಯಾರೂ ಕಾಣದಿರುವಾಗ ತೆರೆಯೊಳಗಿನ ವಜ್ರಮುನಿ

 

 

 

 

 

 

ಯಾರೋ ಬಿದ್ದಾಗ ಒಂದಿಷ್ಟು ಯಂಡಮೂರಿ

ಸೋತಾಗ ಮಂಡಿಯೂರಿ

ದೇವರು ದಿಂಡರು,

ಪಾಪ ಪುಣ್ಯದ ಲೆಕ್ಕಾಚಾರ ಬರೆದಿಟ್ಟ ಜಾತಕ

ಯಾವುದೋ ನೋವಿನ ಎಡೆಬಿಡದ ಸೂತಕ

 

ಅರೆ! ಇಲ್ಲಿ ಎಲ್ಲಿಯೂ

ನಾನು ಇಲ್ಲವೇ ಇಲ್ಲವಲ್ಲಾ

ನಿಜಬಿಂಬ ತೋರಿಸದ ಕನ್ನಡಿಯ ಜಾತ್ರೆಯಲಿ

ನಾನಿರುವುದಕೆ

ಚೂರು ಸಾಕ್ಷಿಯೇ ಕಾಣದಲ್ಲ?!

*****

ಫೋಟೋಕೃಪೆ:  ಈ ಬ್ಲಾಗ್

Advertisements
ಟಿಪ್ಪಣಿಗಳು
 1. veekay ಹೇಳುತ್ತಾರೆ:

  Hello Ranjit,

  e kavanana 4 bari odhide.. yeno churu missing anistide
  aadare aa ‘yeno’ yenendu sulive sigtilla.:-(
  …. manassu chatapadista ide. . keep writing.

  veekay

 2. valase Hakki ಹೇಳುತ್ತಾರೆ:

  ishtavaaytu 🙂

 3. mahabalagiri ಹೇಳುತ್ತಾರೆ:

  channagide…….:)

 4. Ramesh ಹೇಳುತ್ತಾರೆ:

  Looks like inspired by DVG’s kagga. Good one 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s