ಹೀಗೊಂದು ಕಿರು ಚಿತ್ರಕತೆ!

Posted: ಜೂನ್ 14, 2011 in ಕಿರು ಚಿತ್ರಕತೆ

ಲಾಂಗ್ ಶಾಟ್ ನಲ್ಲಿ ತುಂಬು ಬಸುರಿಯಂತಹ ಬಸ್ಸು ಮೆಲ್ಲಗೆ ಸಾಗುತ್ತಿದೆ.

ಬಸ್ಸಿನೊಳಗೆ ಕಂಡಕ್ಟರ್ ಟಿಕೇಟ್ ಟಿಕೇಟ್ ಅಂತ ಕೂಗುತ್ತ, ಸಂದಣಿಯಲ್ಲಿ ಜಾಗವನ್ನು ಕೆಲಸ ನಿರ್ವಹಿಸುತ್ತ ಇದಾನೆ.

 

 

 

 

 

 

ಒಬ್ಬ ವ್ಯಕ್ತಿ, ಸ್ವಲ್ಪ ಹಳೇ ಕಾಲದ ಗೆಟಪ್ಪು, ದಪ್ಪ ಸೋಡಾಗ್ಲಾಸಿನ ಕನ್ನಡಕ, ವಯಸ್ಸು ಸುಮಾರು ೫೫-೬೦. ಬೆಳ್ಳಗಿನ ಕೂದಲು, ಕುರುಚಲು ಗಡ್ಡ. ಪುಟ್ಟ ಜೋಳಿಗೆ. ಸಂದಣಿಯಲ್ಲಿ ಕಷ್ಟಪಟ್ಟು ನಿಂತಿದ್ದು, ಸೆಕೆಗೆ ಬೆವರೊರೆಸಿಕೊಳ್ಳುತ್ತಾನೆ.

(ಕ್ಯಾಮರಾ ಬಸ್ಸಿನೊಳಗೆ ಗಸ್ತು ತಿರುಗುತ್ತಾ, ಕೂತವರನು ತೋರಿಸುತ್ತಲೇ ನಟರ ಹೆಸರು, ನಿರ್ದೇಶಕ, ಬರಹಗಾರರ ಹೆಸರು ಕಾಣಿಸುತ್ತದೆ. ಉದಾ: ಒಬ್ಬ ಹುಡುಗಿ ಆ ೬೦ ವಯಸ್ಸಿನ ವ್ಯಕ್ತಿಯನು ನೋಡಿ ಅಸಹ್ಯ ಪಟ್ಟುಕೊಳ್ಳುವುದನು ತೋರಿಸಿ ಆಕೆ ಹಿಡಿದ ಪುಸ್ತಕದತ್ತ ತಿರುಗಿದಾಗ ಪುಸ್ತಕದ ಬೈಂಡಿನಲ್ಲಿ “Directed By….” ಅಂತ ಇರುತ್ತೆ.. ಹೀಗೆ..)

ಮುಂದೆ ಚೆಕಿಂಗ್ ಇದೆ, ಟಿಕೇಟ್ ತಗೊಳ್ಳಿ ಅಂತ ಅಲ್ಪ ಸಲ್ಪ ಹೆದರಿಸುತ್ತಾ ತನ್ನ ಜೋಳಿಗೆಯೊಳಗೆ ಚಿಲ್ಲರೆ ಕಲೆಹಾಕುತ್ತಾ ಸಾಗುತ್ತಾನೆ ಕಂಡಕ್ಟರ್.

ಆ ೬೦ ವಯಸ್ಸಿನ ವ್ಯಕ್ತಿ ಬಗ್ಗೆ ಅಲ್ಲೆ ಪಕ್ಕದಲ್ಲಿ ನಿಂತಿದ್ದವರಿಗೂ ಒಳ್ಳೆಯ ಅಭಿಪ್ರಾಯ ಇಲ್ಲ. ಬಸ್ಸಿನ ಬ್ರೇಕಿಗೆ ಆತ ತಮ್ಮ ಮೇಲೆ ವಾಲಿದ್ದಕ್ಕೆ ಒಬ್ಬಾತ ರೇಗುತ್ತಾನೆ..

ಕಂಡಕ್ಟರ್ ಹತ್ತಿರ ಹತ್ತಿರ ಬರುತ್ತಿದ್ದಂತೆ ಆ ವ್ಯಕ್ತಿ ತನ್ನಲ್ಲಿನ ಹಣಕ್ಕಾಗಿ ಎಲ್ಲೆಡೆ ಹುಡುಕುವುದು, ಮೇಲಿನ್ ಜೇಬು, ಕೆಳ ಜೇಬು, ಜೋಳಿಗೆ… ಎಲ್ಲಿ ಹುಡುಕಿದರೂ ಚಿಕ್ಕಾಸೂ ದೊರಕದೇ ಅಸಹಾಯಕನಾಗುತ್ತಾನೆ..

(ಮಾಂಟೇಜ್ ನಲ್ಲಿ) ಕಂಡಕ್ಟರ್ ಆತನನ್ನು ಬೈಯ್ಯುವುದು ತೋರಿಸುವುದು, ಬಸ್ಸಿನವರೆಲ್ಲಾ ಬಯ್ಯಲು ಉತ್ಸಾಹ ಪಡುವುದು.. ಆತ ಏನೋ ಹೇಳಲು ತೊಡಗುತ್ತಿದ್ದಂತೆ ಒಬ್ಬಾತ ಆತನನ್ನು ತಳ್ಳಿ, ಅವ ಮತ್ತೊಬ್ಬನ ಮೇಲೆ ಬಿದ್ದು ಅದೇ ರಂಪವಾಗಿ ಎಲ್ಲರೂ ಆತನನ್ನು ಹೊಡೆಯಲು ಅನುವಾಗಿ.. ಬಸ್ಸು ನಿಲ್ಲಿಸಿ ಆತನನ್ನು ಹೊರ (ಇಳಿಸಿ) ತಳ್ಳಿದಾಗ, ಬಸ್ಸಿನಲ್ಲಿ ಮುಂದೆ ಕುಳಿತಿದ್ದಾಕೆ, ಸುಮಾರು ೩೦-೩೩ ವರ್ಷ ವಯಸ್ಸಿನ ಮಹಿಳೆ.. ಹೊಡೀಬೇಡಿ.. ಅಂತ ಕೂಗಿ.. ಜನರನ್ನೆಲ್ಲಾ ನೀವೆಲ್ಲಾ ಮನುಷ್ಯರಾ ಅಂತ ಬೈದಾಗ ಎಲ್ಲಾ ತಣ್ಣಗಾಗಿ ಆಕೆ ಮಾತು ಕೇಳಲು ಶುರುವಾಗುತ್ತಾರೆ.. ಆಕೆ ಆ ವ್ಯಕ್ತಿಯ ಬಗ್ಗೆ ಹೇಳಲು ಅನುವಾಗುತ್ತಾಳೆ.

(Flash back) Fade in :  ಆತ ಒಬ್ಬ ಶಾಲಾ ಮಾಸ್ತರು. ಅವತ್ತು ಸ್ಕೂಲ್ ಡೇ ಫಂಕ್ಷನ್ ಇರುತ್ತೆ. ಚೆನ್ನಾಗಿ ಓದುವ ಹುಡುಗರನ್ನು ಕಂಡರೆ ಮಾಸ್ತರಿಗೆ ಬಹಳ ಒಲವು. ಪುಸ್ತಕ ಫ್ರೀಯಾಗಿ ಹಂಚುವುದು, ಕಂಪಾಸ್, ಪೆನ್ನು ಬಹುಮಾನವಾಗಿ ಕೊಡುವುದು ಅವರ ಮಾಮೂಲಿ ಚಟ. ಅವತ್ತಿನ ಸ್ಕೂಲ್ ಡೇ ನಲ್ಲಿ ತಾವು ಕಲಿಸಿದ್ದ ಬಡಹುಡುಗನೊಬ್ಬ ಒಳ್ಳೆ ಅಂಕ ತಂದಿದ್ದಕ್ಕೆ ಖುಷಿಯಾಗಿ, ಕೊಡಲು ಪುಸ್ತಕವೇನೂ ಇರದೇ.. ಹಿಂದೆ ಮುಂದೆ ಯೋಚಿಸದೇ.. ತನ್ನಲ್ಲಿದ್ದ ಕೊಂಚ ಕಾಸನ್ನು ಪೂರ್ತಿಯಾಗಿ ಆ ಹುಡುಗನಿಗೆ ಕೊಟ್ಟುಬಿಡುತ್ತಾರೆ..

ಅದನ್ನು ಆ ಮಹಿಳೆ ಗಮನಿಸಿ.. ಮೆಚ್ಚುಗೆ ಪಟ್ಟಿರುತ್ತಾಳೆ.. Fade out..

ಆ ಮಾಸ್ತರರ ಹೆಸರು ಕೇಳಿ ಕಂಡಕ್ಟರು “ಸಾರ್ ಕ್ಷಮಿಸಿ ಬಿಡಿ.. ನಾನೂ ನಿಮ್ಮ ಸ್ಟೂಡೆಂಟ ಆಗಿದ್ದೆ.. ನೋಡಿದ ಕೂಡಲೇ ಅರಿವಾಗಲಿಲ್ಲ” ಅನ್ನುತ್ತಾನೆ..

ಆಕೆ ಜತೆಗೆ ಬಂದಿದ್ದ ಮಗ ಮಾಸ್ತರರ ಬಿದ್ದ ಜೋಳಿಗೆಯ ಧೂಳು ಕೊಡವಿ ನಗುತ್ತಾ ಕೊಡುತ್ತಾನೆ..

~The end~

 

(Painting credit : http://sylviegraphicdesigns.com/index.html)

Advertisements
ಟಿಪ್ಪಣಿಗಳು
  1. Nuthan Hb ಹೇಳುತ್ತಾರೆ:

    What abt background music?
    🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s