ಇದು ಹೈಕು ಹೊತ್ತು!

Posted: ಜೂನ್ 17, 2011 in ಕವಿತೆ ತರಹ, ಹನಿಗಳು..., ಹೈಕು
ಹಾರೆಯಿಂದ ಭುವಿಯ
ಎದೆ ಬಗೆದದ್ದು ನಿಜ
ಅದಕ್ಕೆ ಈ ಹಸಿರು.

******

ವಸಂತ, ಚಿಗುರು
ಹಾಗೇನೆ ನಾನು
ನನ್ನ ಮಗು

*****

ಅವಳ ನೋಟ
ನನ್ನ ಅಸ್ತಿತ್ವವನೇ
ಅಲುಗಾಡಿಸಿತು

****ಮಾತು ಎಂದ ಕ್ಷಣ ಮಾತು 
ಉಂಟು ಮೌನ ಎಂದಾಕ್ಷಣ ಮೌನ
ಇಲ್ಲ

*****

ಟೀಚರ್ ಕೋಲಿಂದ ಪೆಟ್ಟು ಕೊಟ್ಟರು
ಕಲಿಯಲಿಲ್ಲ
ಬದುಕು ಕೋಲನ್ನು ಊರುಗೋಲಾಗಿಸಿತು
ಕಲಿತೆ

******

ಹುಲ್ಲ ಮೇಲೆ ಹರಿಹಾಯ್ವ ಗಾಳಿ
ಕಟ್ಟಡವೊಂದಕ್ಕೆ ಡೀ ಕೊಟ್ಟು
ಅಸುನೀಗಿತು

*****

ಮರಳ ರಾಶಿ
ಅಲೆಬಂದು ಅಳಿಸುವವರೆಗಷ್ಟೇ
ಏಡಿಯ ಹೆಜ್ಜೆಗುರುತು, ಮನೆ.

*****

ಅವಳು ಬಿಟ್ಟುಹೋದ ಕ್ಷಣ
ಮೌನ ಅವನ
ಕತ್ತುಹಿಸುಕಿತು.

*****

ಭರಪೂರ ಹಸಿವು
ಕವಿತೆಯ ಪುಟ
ತಣ್ಣಗಾಗಿಸಲಿಲ್ಲ

******

ಒಳಗಿನದೇ ಪರಿಣಾಮ
ಕೊಡೆ ಬೇಡ ಅನ್ನಿಸುವಂಥ
ಮಳೆ ಹೊರಗೆ.
ಟಿಪ್ಪಣಿಗಳು
 1. sukhesh ಹೇಳುತ್ತಾರೆ:

  ಚೆನ್ನಾಗಿವೆ 🙂

 2. Venkatraman bhat ಹೇಳುತ್ತಾರೆ:

  ಹುಲ್ಲ ಮೇಲೆ ಹರಿಹಾಯ್ವ ಗಾಳಿ
  ಕಟ್ಟಡವೊಂದಕ್ಕೆ ಡೀ ಕೊಟ್ಟು
  ಅಸುನೀಗಿತು
  ಅವಳು ಬಿಟ್ಟುಹೋದ ಕ್ಷಣ
  ಮೌನ ಅವನ
  ಕತ್ತುಹಿಸುಕಿತು.

  *****

  ಭರಪೂರ ಹಸಿವು
  ಕವಿತೆಯ ಪುಟ
  ತಣ್ಣಗಾಗಿಸಲಿಲ್ಲ

  ******

  ಒಳಗಿನದೇ ಪರಿಣಾಮ
  ಕೊಡೆ ಬೇಡ ಅನ್ನಿಸುವಂಥ
  ಮಳೆ ಹೊರಗೆ.
  ivu tuMba ishtavadavu

 3. V.R.BHAT ಹೇಳುತ್ತಾರೆ:

  ವೈದ್ಯ ಮಹಾಶಯರೇ, ಹೈಕುಗಳು ರಾತ್ರಿಯಲ್ಲಿ ಹಳ್ಳಿಯ ರಸ್ತೆಗಳಲ್ಲಿ ಕೈಗೆಸಿಗುವ ಟಾರ್ಚುಗಳಿದ್ದಂತೇ, ಯಾವುದನ್ನೂ ಚಿವುಟುವ ಅವಶ್ಯಕತೆಯಿಲ್ಲ, ಹರಿಯಲಿ ಭಾವನೆಗಳ ಮಹಪೂರ ಜೀವನದುದ್ದಕ್ಕೂ!

 4. V.R.BHAT ಹೇಳುತ್ತಾರೆ:

  ಮೇಲಿನ ಕಾಮೆಂಟಿನಲ್ಲಿ ’ವೈದ್ಯ’ರು ಎಂದಿದ್ದು ಹೈಕುಗಳನ್ನು ನೀಡುವ ವೈದ್ಯ ನೀವೆಂಬ ಅರ್ಥದಿಂದ.

 5. Mahabalagiri Bhat ಹೇಳುತ್ತಾರೆ:

  esta aytu channagide 🙂

 6. ಅನಾಮಿಕ ಹೇಳುತ್ತಾರೆ:

  ರಂಜಿತ್, ಹೈಕುಗಳು ತುಂಬಾ ಚೆನ್ನಾಗಿವೆ, ವಿಶಿಷ್ಟವಾಗಿವೆ, ಮನದಲ್ಲೊಂದು ಸ್ಪಾರ್ಕ್ ಚಿಮ್ಮಿಸಿ ಬೆಳಗುತ್ತವೆ, ಗುಡ್, ಇದೆ ಮೊದಲ ಬಾರಿ ನಿಮ್ಮ ಹೈಕು ನೋಡಿದ್ದು ನಾನು, ವೆಲ್ ಡನ್. ಗುಡ್ ಲಕ್. –ರಾಮಚಂದ್ರ ಹೆಗಡೆ ,www.chaitrarashmi.com

 7. sukhesh ಹೇಳುತ್ತಾರೆ:

  ನಮಗೆ hike ಟೈಮು ಮಾರಾಯ್ರೇ. ಯಾವ smiley ಹಾಕ್ಬೇಕು ಅಂತ ಗೊತ್ತೇ ಆಗ್ತಿಲ್ಲ!

 8. Hema Powar ಹೇಳುತ್ತಾರೆ:

  ಭಾವ ತೀವ್ರತೆ ನಿಮ್ಮ ಶಕ್ತಿ ರೀ, ತುಂಬ ಅರ್ಥಪೂರ್ಣ ಹಾಯ್ಕುಗಳು. ಇಷ್ಟವಾದವು. ಕಡಿಮೆ ಪದಗಳಲ್ಲಿ ಎಷ್ಟೆಲ್ಲವನ್ನು ಹಿಡಿದಿಟ್ಟಿದ್ದೀರಿ u r a master 🙂

 9. Siddharam H ಹೇಳುತ್ತಾರೆ:

  ಇವು ಹೈಕುಗಳಲ್ಲ. ಹೈಕುಗಳೆಂದರೆ ಜಪಾನಿ ಕಾವ್ಯ ಪ್ರಕಾರದ ರೀತಿಯಲ್ಲಿ ಹದಿನೇಳು ಅಕ್ಷರಗಳ ಗುಚ್ಛ. ಇವುಗಳನ್ನು ಹನಿಕವಿತೆಗಳೆನ್ನಬಹುದು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s