ಅಡಿಗೆ ಷರಾ ಬರೆದು….

Posted: ಜೂನ್ 28, 2011 in ಹನಿಗಳು..., ಹೈಕು

ಬದುಕು, ಮಿಂಚುಹುಳು

ಅಗೋ ಹೊತ್ತಿತು

ಇಗೋ ನಂದಿತು

******

ನನ್ನದೂ ಅಲ್ಲ

ಅವನದೂ

ಬೇಲಿಯೇ ಮೇಲೇ ಅರಳಿದೆ ಹೂವು

*****

ಅವಳಿಂದ ಹುಟ್ಟಿದ ಕವಿತೆ

ಅಡಿಗೆ ಷರಾ ಬರೆದು ನನ್ನದಾಗಿಸುವ

ವ್ಯರ್ಥ ಪ್ರಯತ್ನ ಜಾರಿಯಲ್ಲಿದೆ

******

ನೆಲಾ ನೀರು

ನೀರು ನೆಲಾ..

ಬೇರ ತೇರು ಸಧ್ಯದಲ್ಲೇ ಜಾಹೀರು

******

ನಿನ್ನೆ ಬ್ಯೂಸಿ, ಇಂದು ಆಗಲ್ಲ

ಸಾಧ್ಯವಾದರೆ ನಾಳೆ ಸಿಗಬೇಕು

ನನಗೆ ನಾನು.

******

ಯಾರದೋ ನೋವ ಸಿಗರೇಟು

ನನ್ನ ಪದಕಿಡಿ

ಕ್ಷಣದಲ್ಲೇ ಆಗಲಿದೆ ಎಲ್ಲ ಧೂಮ.

********

ಮೈದಾನದಂತಿದ್ದ ಕೊಳ

ಕಪ್ಪೆ ಹಾರಿದ್ದೇ ತಡ

ನೀರು ನೀರಾಯ್ತು.

********

ಚಿತ್ರಕೃಪೆ : ಇಲ್ಲಿಂದ

ಟಿಪ್ಪಣಿಗಳು
 1. Venkatraman Bhat ಹೇಳುತ್ತಾರೆ:

  tumbaa ishtavaaytu, kone koneya haikugalantuu superb..

 2. kiranaasangatha ಹೇಳುತ್ತಾರೆ:

  ಅದ್ಭುತ ಅನ್ನಿಸೋ ಹನಿಗಳು. ಮೂರನೆಯದಂತೂ ನನ್ನದೇ ಮನಸನ್ನ ಬರೆದಿಟ್ಟ ಹಾಗಿದೆ. ಆದ್ರೆ ಪದಕಿಡಿ ಅಂದ್ರೇನು ಅರ್ಥ ಆಗ್ಲಿಲ್ಲ. ಅದು ‘ಪದ ಕಿಡಿ’ಯಾ?

 3. ರಂಜಿತ್ ಹೇಳುತ್ತಾರೆ:

  ವೆಂಕಟ್ರಮಣ ಭಟ್, ಥ್ಯಾಂಕ್ಸ್.. ನನಗೂ ನಿಮ್ಮ ಪುಟ್ಟ ಪುಟ್ಟ ಹನಿಗಳು ತುಂಬಾ ಪ್ರಿಯ. ಬರೆಯುತ್ತಿರಿ.

  ಕಿರಣ ಅಸಂಗತ, ಥ್ಯಾಂಕ್ಯೂ!, ಅದು ಪದ ಕಿಡಿ ಯೇ. ಒಂದಿಂಚು ಜಾಗ ಮಿಸ್ಸಾಗಿ, ಅರ್ಥವೇ ಸ್ಥಾನಪಲ್ಲಟ ಆಗಿಬಿಟ್ಟಿತು ನೋಡಿ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s