ಅವ್ವನ ಸೀರೆ…!

Posted: ನವೆಂಬರ್ 28, 2011 in ಕವಿತೆ, ಕವಿತೆ ತರಹ

ಟಣ್ ಟಣ್ ಸಾಸರಿನೊಳಗೆ
ಅಳತೆ ಮಾಡಿ ಹಾಕುವ ಚಾ
ಅಲ್ಲವೋ ಕವಿತೆಯೆಂದರೆ
ಗೂಡಂಗಡಿಯಲಿ ದಾರಿಹೋಕ
ಸುರಕ್ ಸುರಕ್
ಎಂದು ಸವಿವ ಟೀ.

ಬೇಕಾದ್ದನ್ನು ಹೆಕ್ಕಿ
ಬೇಡದ್ದನ್ನು ಬಿಸುಡುವ
ಬಫೆಯಲ್ಲವೋ ಕವಿತೆಯೆಂದರೆ
ಬಟ್ಟಲಿನೊಳಗೊಂದಗುಳೂ
ಉಳಿಯದಂತೆ ತಿಂದು
ತಪ್ತನಾಗಬಲ್ಲಂಥ ಹಸಿವು.

ಚೂರು ಸುರಿದು ಗಾಳಿಗೆ
ಹಾರಿಹೋಗುವ ಮೇಘವಲ್ಲವೋ
ಕವಿತೆಯೆಂದರೆ
ಸರ್ವಸ್ವವನೂ ಸುರಿದು
ಬರಿದಾಗುವ ಮಳೆ.

images

ಮಡಿಕೆಗಳಿಲ್ಲದ ರೇಷಿಮೆ
ಜರತಾರಿ ಸೀರೆಯಲ್ಲವೋ
ಕವಿತೆಯೆಂದರೆ
ಪುಟ್ಟನ ಮೂಗೊರೆಸಲ್ಪಟ್ಟ
ಅವ್ವನ ಸೀರೆ.

****

 

(ಫೋಟೋಕೃಪೆ : www.gulfnews.com)

ಟಿಪ್ಪಣಿಗಳು
 1. Supreeth Ks ಹೇಳುತ್ತಾರೆ:

  ಜಗತ್ ಸತ್ಯವನ್ನೊಂದೇ
  ಸಾಲಲ್ಲಿ ಕೆಡವಿ
  ಹಾಕುವುದಲ್ಲವೋ,
  ಸಾಲು ಸಾಲಲ್ಲು
  ಸಾಲದಷ್ಟು ಕೆನ್ನೆ
  ಮಿದು ಮುತ್ತುಗಳಂತೆ
  ಕವಿತೆ

 2. ಅನಾಮಿಕ ಹೇಳುತ್ತಾರೆ:

  Hi Ranjith,
  ಬಟ್ಟಲಿನೊಳಗೊಂದಗುಳೂ
  ಉಳಿಯದಂತೆ ತಿಂದು
  ತಪ್ತನಾಗಬಲ್ಲಂಥ ಹಸಿವು.

  killer lines…! too gud ri…

 3. ಅನಾಮಿಕ ಹೇಳುತ್ತಾರೆ:

  Hi Ranjith,
  ಬಟ್ಟಲಿನೊಳಗೊಂದಗುಳೂ
  ಉಳಿಯದಂತೆ ತಿಂದು
  ತಪ್ತನಾಗಬಲ್ಲಂಥ ಹಸಿವು.

  Killer lines ri… liked it!

 4. ಅನಾಮಿಕ ಹೇಳುತ್ತಾರೆ:

  unable to comment

 5. Divya ಹೇಳುತ್ತಾರೆ:

  Beautiful lines Ranjith!!

 6. ಮಂಜುನಾಥ ಕೊಳ್ಳೇಗಾಲ ಹೇಳುತ್ತಾರೆ:

  ಮಡಿಕೆಗಳಿಲ್ಲದ ರೇಷಿಮೆ
  ಜರತಾರಿ ಸೀರೆಯಲ್ಲವೋ
  ಕವಿತೆಯೆಂದರೆ
  ಪುಟ್ಟನ ಮೂಗೊರೆಸಲ್ಪಟ್ಟ
  ಅವ್ವನ ಸೀರೆ.

  ವಾಹ್, ಎಂಥಾ ಚೆಂದದ ಸಾಲು!

 7. Prakash.B. Jalahalli ಹೇಳುತ್ತಾರೆ:

  nimma avvan sire kavite tumba chennagide kivtea artavannu nivu visistvagiruv pratitimeglind kottiddiri.sogasagive nimma pratimegalu.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s