ಆವಿಗಣ್ಣಿಂದ..

Posted: ಜನವರಿ 19, 2012 in ಕವಿತೆ, ಕವಿತೆ ತರಹ

ಮೋಡವೊಂದು ಹನಿಯಾಗಲು
ನಿರಾಕರಿಸಿದಂತೆ
ಒಂದು ದುಃಖ ಹಾಗೇ ನಿಂತಿತು
ಎದೆಯ ಹೊಸ್ತಿಲಲ್ಲ
ಕಂಬನಿಯಾಗದೇ

ಅವ್ವ ಆದರೆ ಈರುಳ್ಳಿ ಹಚ್ಚುತ್ತಾಳೆ
ಚಿಟ್ಟೆ ರೆಕ್ಕೆ ಬಡಿಯುತ್ತೆ ಹುಚ್ಚುಚ್ಚಾಗಿ
ಮೇಷ್ಟರಿಗೆ ಮೇಜು
ಕಲಹಪ್ರಿಯರಿಗೆ ಗಾಜು
ಒಡೆವುದೇ ಮೋಜು

NTPIADay Tears 3

ಇಂಥ ಸಮಯದಲ್ಲಿ ಮಾತು ಅಸಹ್ಯ
ಮೌನ ಅಸಹನೀಯ
ಧ್ಯಾನ ಅಂದರೆ ಕೊಂಚ ಕೊಂಚವಾಗಿ
ನಶಿಸುವುದು
ಕವಿತೆ ಬರೆವುದು ಆತ್ಮಹತ್ಯೆ.

ಕವಿ ಅಂದಂತೆ ಆಕಾಶ ಮಡಚಿ
ಜೇಬಿನಲ್ಲಿ ಇಟ್ಟುಕೊಳ್ತಾನಾದರೆ ನಾನೂ
ಹಸನ್ಮುಖಿಯಾಗುವೆ ನನ್ನ ಹುಡುಗಿ
ಹಸೆಯೇರುವಾಗ

ಇಷ್ಟಕ್ಕೆಲ್ಲಾ ಅಳ್ತಾರೇನೋ
ಗಂಡಸಾಗಿ
ಅಂದಾಗ ಮಾತ್ರ ಅವಳ
ಸಾಂತ್ವನಕ್ಕೆ ಬರೆ ಕೊಡುವಂತೆ
ಆವಿಗಣ್ಣಲ್ಲಿ
ಆಕೆಯನ್ನೇ ನೋಡುತ್ತೇನೆ..

 

ಫೊಟೋಕೃಪೆ: ಇಲ್ಲಿಂದ

ಟಿಪ್ಪಣಿಗಳು
 1. Swarna ಹೇಳುತ್ತಾರೆ:

  Wonderful lines. Liked it.
  Swarna

 2. Satish ಹೇಳುತ್ತಾರೆ:

  ranjith… sooperb…… tumbaa ishtavaaythu!…. nimma e-magazine ID heLteera please?

 3. Hiremath Sachinkumar ಹೇಳುತ್ತಾರೆ:

  ಮನಕೆ ಲಗ್ಗೆ ಹಾಕುವ ನಿಮ್ಮ ಬರಹಗಳು ಅಲ್ಲೇ ಬಂಧಿಯಾಗಿಬಿಡುತ್ತವೆ… ಇನ್ನಷ್ಟು ಬರೆಯಿರಿ..
  ಮ್ಮ ಬರಹಗಳ ಜಾತಕ ಪಕ್ಷಿ-
  ಸಚಿನ್ ಕುಮಾರ ಬಿ.ಹಿರೇಮಠ ಜೇವರ್ಗಿಯಿಂದ…

 4. Vikram ಹೇಳುತ್ತಾರೆ:

  nice….reminded me one of my lines…..’…heppugaTTida mODa maLeyaagade tEluvudu…’….but in a different context. Wonder how same ingrediants can be used in different context with different style for different theme….

 5. keshrad ಹೇಳುತ್ತಾರೆ:

  Brilliant!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s