ಉತ್ತರಗಳು ಪ್ರಶ್ನೆಯಲ್ಲಿಯೇ ಇರುತ್ತವೆ….

Posted: ಫೆಬ್ರವರಿ 6, 2012 in ದಿನದ ಎಸಳುಗಳು..., ಬದುಕೇ, ಐ ಲವ್ ಯೂ!, ಲಹರಿ
ಟ್ಯಾಗ್ ಗಳು:, , ,

ಮೊಬೈಲು ಬಂದ ನಂತರ ಜನಕ್ಕೊಂದು ಹೊಸ ಐಲು. ಯಾವುದಾದರೂ ಪ್ರವಾಸಕ್ಕೆ ಹೋದಾಗ ಅಲ್ಲಿನ ಪರಿಸರ ಆಸ್ವಾದನೆಗೆ ಕೊಡುವ ಸಮಯಕ್ಕಿಂತ ಅದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಆಸೆಯೇ ಹೆಚ್ಚಾಗಿರುತ್ತದೆ.  ಓಹ್ ಅಲ್ಲಿಯಾ ಹೋಗಿದ್ದೇನೆ, ಬೇಕಿದ್ರೆ ನೋಡು ಅಂತ ಚಂದ ಸ್ಮಾರಕ ದ ಮುಂದೆ ಹಲ್ಲುಗಿಂಜುತ್ತಾ ನಿಂತ ಫೋಟೋವನ್ನು ಸಾಕ್ಷಿಯಂತೆ ತೋರಿಸುತ್ತೇವೆ. ಹೆಸರನ್ನು ಕೆತ್ತಿ ಅಲ್ಲಿನ ಪರಿಸರದ ಚೆಲುವಿಗೆ ಧಕ್ಕೆ ತರುತ್ತೇವೆ. ಬೇರಾರಿಗೋ, ಮುಂದೆಂದೋ ತೋರಿಸಿಕೊಳ್ಳುವ ತವಕದಲ್ಲಿ, ಈ ಕ್ಷಣದ ಅನುಭೂತಿಯೊಂದನ್ನು ತ್ಯಾಗ ಮಾಡುತ್ತೇವೆ. ಅನುಭೂತಿಯೊಂದು ಇಂದೂ ಇಲ್ಲದ ಅಂದೂ ಇಲ್ಲದ ಅಯೋಮಯ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತದೆ. ಯಾರೋ ಒಬ್ಬ ’ಅಲ್ಲಿ ನಿಂತಾಗ ನಿನ್ನೊಳಗೆ ಬಂದ ಅನಿಸಿಕೆಯೇನು?’ ಅಂತ ಕೇಳಿದರೆ ಮೌನವಹಿಸುತ್ತೇವೆ.. ಅಲ್ಲೊಂದು ರೀತಿ ಪರಿಮಳ ಮೈ ಜುಂ ಅನ್ನಿಸುವಂತೆ ಮಾಡಿತ್ತಲ್ಲವಾ? ಅಂತ ಕೇಳಿದರೆ ಪೆದ್ದು ಪೆದ್ದಾಗಿ ಹೌದು ಹೌದು ಅನ್ನುತ್ತೇವೆ.

ಕೆಲವೊಮ್ಮೆ ಮಾನವೀಯತೆಯನ್ನು ಪಕ್ಕಕ್ಕಿರಿಸಿ ಮೋಜು ಅನುಭವಿಸುವಂತೆಯೂ ಮಾಡುತ್ತದೆ, ಈ ಚಿತ್ರದಲ್ಲಿ ತೋರಿಸಿದಂತೆ.  ಸುಮ್ಮನೆ – ಕಡಿಮೆ ಸಮಯವಿತ್ತು, ತಪ್ಪಿಸುವುದು  ಅಸಾಧ್ಯವಿತ್ತು ಅನ್ನುವ ಕಾರಣ ಕೊಟ್ಟರೂ, ಪ್ರಯತ್ನ ಕೂಡ ಮಾಡದ ಗಿಲ್ಟ್ ಮನಸ್ಸಾಕ್ಷಿಯನ್ನು ಬರೆ ಬೀಳುವಂತೆ ಹೊಡೆಯುವುದು ಬಾಧಿಸದೇ ಇರದು.

image

ಈ ಮಾನವೀಯತೆಯ ಕುರಿತು ಹತ್ತು ವರ್ಷದ ಹಿಂದಿನ ನಮ್ಮ ವಿಚಾರಧಾಟಿ ಮತ್ತು ಈಗಿನ ವಿಚಾರಧಾಟಿಯ ವ್ಯತ್ಯಾಸವೇನು?  ಈ ಅವರೋಹಣಕ್ಕೆ ಕಾರಣಗಳಾವುವು? ಈ ಕ್ಷಣದ ಅಗತ್ಯ ಮುಖ್ಯವೋ ಅಥವ ಮುಂದೆಂದೋ ನೋಡಿಕೊಂಡು ಆಸ್ವಾದಿಸುವ ವೀಡಿಯೋ, ಫೋಟೋ ಮುಖ್ಯವೋ?

ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಇಲ್ಲಿನ ಉದ್ದೇಶವಲ್ಲ. ಇಂತಹ ಪ್ರಶ್ನೆ ಮೂಡ್ತಾವಾ ಇಲ್ವಾ ಅನ್ನೋದೇ ಮುಖ್ಯ.

ಉತ್ತರಗಳು ಪ್ರಶ್ನೆಯಲ್ಲಿಯೇ ಇದೆ, ಹುಡುಕಿಕೋ ಅನ್ನುವ ರೂಮಿಯ ಮಾತುಗಳು ನಮ್ಮ ಮಾನವೀಯತೆಯನ್ನು ಆಗಾಗ ಎಚ್ಚರಿಸುತ್ತಲೆ ಇರುತ್ತದೆ, 
ಎಚ್ಚರಿಸುತ್ತಲೇ ಇರಬೇಕು ಕೂಡ.

 

ಚಿತ್ರಕೃಪೆ : ಹರೀಶ್ ಗಂಗಭೈರಯ್ಯ.

ಟಿಪ್ಪಣಿಗಳು
  1. ಮಹೇಶ ಹೇಳುತ್ತಾರೆ:

    ನಿಮ್ಮ ಬ್ಲಾಗ್ ಬರಹ ಸತ್ಯ. ಹೋದಲ್ಲೆಲ್ಲಾ ಮೊಬೈಲ್ ನಲ್ಲೇ ಮುಳುಗಿರುವ ಸಾಕಷ್ಟು ಜನರನ್ನು ನಾನೂ ನೋಡಿದ್ದೇನೆ. ಬ್ಲಾಗ್ ಚಿತ್ರ ತುಂಬಾ ಅರ್ಥವತ್ತಾಗಿದೆ

  2. ಮದು ಸೂಧನ್ ಹೇಳುತ್ತಾರೆ:

    ನಿಮ್ಮ ಬರೆಹ ನಿಜಕ್ಕೂ ಸ್ಪೂರ್ತಿದಾಯಕ. ನಿಜಕ್ಕೂ ಮನಮುಟ್ಟುವ ಸಾಲುಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s