ಹಂಬಲವಾಗೇ ಉಳಿಯಲಿ
ನೀ ಸಿಗುವ ಬಯಕೆ
ಕಿಟಕಿಯಾಚೆಗೇ
ಉಳಿಯಲಿ ಚಂದಿರ
ಹಾಗೇ ಉಳಿಯಲಿ ಎದೆಯೊಳಗೆ
ಬರೆದದ್ದು ಕವಿತೆಯಾಗದ ಅಸಹನೆ
ಆಚೆಯ ವರ್ಷಧಾರೆಗೆ ನಿರ್ದಾಕ್ಷಿಣ್ಯವಾಗಿ
ಪುಟಕ್ಕೆಂದು
ಮನದೊಳಗೆ ಭುಗಿಲೆದ್ದ
ಒಲವ ಹಳೆಯ ನೆನಪು.
ಅಲೆಯೊಳಗಿಳಿದು ಮುಳುಗಲಿ
ಸುಳಿಯಲಿ ಸಿಲುಕಲಿ
ಅಳಿಯಲಿ ಯಾ ಕೊಳೆಯಲಿ
ತೀರದಲಿ ಗೀಚಿದ್ದ ನಿನ್ನ ಹೆಸರು
ಅದರೊಳಗಿರಿಸಿದ್ದ ನೂರೊಂದು ಕನಸು.
ಊಹೆಯಲಿ ನೀನಿತ್ತ
ಮುತ್ತಿಗೆ ತನ್ನ ಹೆಸರೇ ಇದ್ದುದಕ್ಕೆ
ನಾಚಿ ಕರಗಿತ್ತಲ್ಲ ಸ್ವಾತಿ ಮುತ್ತು
ಅಂಥ ಪ್ರೀತಿಗೂ ಬಿತ್ತಲ್ಲ ಬೆಂಕಿ
ಕೊನೆಗೂ ಹಂಬಲವಾಗೇ ಉಳಿಯಲಿ
ನೀ ಸಿಗುವ ಬಯಕೆ ಮತ್ತು
ಕಿಟಕಿಯಾಚೆಗೇ
ಉರಿಯಲಿ ಚಂದಿರ.
tumba chennagide kavana… hrudayakke tattutte…
Hi Bro, ನಿನ್ನ ಕವಿತೆ ಹಿಂದಿರುವ ದುಃಖ ಅಪರಿಮಿತವಾದದ್ದು….ಕವಿತೆ ಎಲ್ಲೊ ನನ್ನಂದೆ ಒಂದು ಬಿಂಬವ ಎಂದು ಅನಿಸದೆ ಇರದು.
ಉರಿಯದೆ ಉಳಿದು ಬಿಡಲಿ ಚಂದಿರ
ಸರಳುಗಳ ನಡುವೆ ಇಳಿಯಲಿ ಒಂದಿಷ್ಟು ಬೆಳದಿಂಗಳು
ತುಂಬಾ ಇಷ್ಟಪಟ್ಟೆ. ಚನ್ನಾಗಿದೆ.
thanks for all your appreciations..