ನಿನ್ನ ಸಮಯ, ಮೋಡ ಮಳೆಯಾಗುವುದರೊಳಗೆ!

Posted: ಜೂನ್ 11, 2012 in ಕವಿತೆ, ಕವಿತೆ ತರಹ

ನೀನು ನನ್ನ ಜತೆ ಈ ಬರಲಿರುವ ಮಳೆಯಲಿ

ಒಂದರ್ಧ ಟೀ ಹಂಚಿಕೊಂಡರೆ

ಒಂದು ಕವಿತೆಯ ಹುಟ್ಟಿಗೆ ಕಾರಣಳಾಗಬಹುದು

ನಿನ್ನ ಕೆನ್ನೆ ಮೇಲೆ ಬೀಳುವ ಆ ಮೊದಲ ಹನಿ

ನನ್ನ ಮುತ್ತಿಗೆ ಸಾಕ್ಷಿಯಾಗಬಹುದು

ಮುತ್ತಿನ ಸದ್ದು ಗುಡುಗಿಗೆ ಸಾಯದಿರುವಂತೆ

ಕಾಪಾಡುವ ಜವಾಬ್ದಾರಿ ನನ್ನದಾಗಬಹುದು

ಎದೆಬಡಿತದ ಜಲತರಂಗ

ನಾದ ಪಾದವನೂ ತಲುಪಬಹುದು

ಮತ್ತು ನಾನು ಜೀವನವಿಡೀ ನಿನಗೆ

ಋಣಿಯಾಗಿರಬಹುದೋ ಏನೋ.

ಒಮ್ಮೆ ಯೋಚಿಸು

ಯಾವುದಕ್ಕೂ

ನೀ ಮನಸು ಮಾಡಬೇಕು

ನಿನ್ನ ಸಮಯ

ಮೋಡ ಮಳೆಯಾಗುವುದರೊಳಗೆ

ಸಂಜೆಯ ಕಲರು ಕದಡುವುದರೊಳಗೆ

ಚಾ ಪಾತ್ರೆ ಕುದಿವವರೆಗೆ

ಮತ್ತೆ ಹರಸಲು ದೇವತೆಗಳಿಗೂ

ಪುರುಸೊತ್ತಿರಲಿಕ್ಕಿಲ್ಲ.

ಯಾವುದೂ ಕೂಡಿಬರದೇಹೋದರೆ

ಈ ಮಳೆ ಬೀಳಬಹುದಾದ ಸಂಜೆ

ಗಾಂಧಿಬಜಾರಿನ ಗಲ್ಲಿಯೊಂದರಲ್ಲಿ

ಕವಿತೆಯೊಂದು ಹತ್ತಿರ ಸುಳಿದೂ

ನನ್ನ ಮುಟ್ಟದೆಯೇ ಮರೆಯಾಗುವ ದುಃಖವನು

ಮೂಕನಾಗಿ ಅನುಭವಿಸಬೇಕಾಗಬಹುದು.

(ಚಿತ್ರಕೃಪೆ : website )

ಟಿಪ್ಪಣಿಗಳು
  1. ವೆಂಕಟ್ರಮಣ ಹೇಳುತ್ತಾರೆ:

    ವಾಹ್.. ಎಂಥ ಸುಂದರ ಪದ್ಯ.. ಹಾಡಿಕೊಂಡರೂ ಹಾಡಿಕೊಳ್ಳಬಹುದಾದ್ದು. ಇಷ್ಟವಾಯ್ತು.
    -ವೆಂಕಟ್ರಮಣ

  2. keshrad ಹೇಳುತ್ತಾರೆ:

    brilliant poetry! What a lines. Couldn’t take out a single word!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s