ಪ್ರೀತಿ ಬಗ್ಗೆ ಒಂದಿಷ್ಟು…

Posted: ಡಿಸೆಂಬರ್ 15, 2018 in ಐ ಲವ್ ಯೂ!, ಬದುಕೇ, ಬದುಕೇ, ಐ ಲವ್ ಯೂ!

ಪ್ರೀತಿ ಎಂದರೇನು ಅನ್ನುವುದು ತುಂಬಾ ಕ್ಲೀಷೆ ಪ್ರಶ್ನೆ.

ಹಲವಾರು ಬರಹಗಾರರು ತಮ್ಮ ತಮ್ಮ ಅನುಭವಕ್ಕನುಗುಣವಾಗಿ ಪ್ರೀತಿಯ ವ್ಯಾಖ್ಯೆಯನ್ನು ನೀಡಿದ್ದಾರೆ. ಎರಡು ಹೃದಯಗಳ ಮಿಲನ, ಎರಡು ಜೀವ ಒಂದೇ ಮನಸ್ಸು ಎಂಬುದೆಲ್ಲಾ ಪುಸ್ತಕದ ಬದನೆಕಾಯಾಯಿತು. ಸ್ಟೀಫನ್ ಕೋವೆಯಂಥ ಲೇಖಕ ಪ್ರೀತಿ ಅಂದರೆ ಕೊಡುವುದು ಅಂತ ಅಂದಿದ್ದಾನೆ. ಅವನ ಪ್ರಕಾರ ಪ್ರೀತಿ ಅನ್ನುವುದು ವರ್ಬ್. ಅಂದರೆ ಅದೊಂದು ಭಾವ ಅಲ್ಲ, ನಿರಪೇಕ್ಷೆಯಿಂದ ನೀಡುವುದು.

ತಾಯಿಯೊಬ್ಬಳು – ಪ್ರೀತಿಗೆ ಜೀವಂತ ಭಾಷ್ಯ ಬರೆಯುತ್ತಾಳೆ. ಅನ್ ಕಂಡೀಷನ್ಡ್ ಪ್ರೀತಿ ನೀಡಿ, ನಾನು ನಿನ್ನ ಪ್ರೀತಿಸುತ್ತೀನಿ ಅಂತ ಒಂದು ಮಾತೂ ಆಡದೇ ಪ್ರೀತಿಯನ್ನು ಬದುಕಿ ತೋರಿಸುತ್ತಾಳೆ. ಕೊನೆವರೆಗೂ ಕಾಳಜಿ ವಹಿಸುತ್ತಾಳೆ. ತನಗೆ ಕೂಡದ ವಯಸ್ಸಿನಲ್ಲೂ ಮಕ್ಕಳ ಕುರಿತ ಕಳಕಳಿ ಪ್ರತಿದಿನ ಇಟ್ಟುಕೊಂಡಿರುತ್ತಾಳೆ.

ಇಷ್ಟಕ್ಕೂ ನಿಜವಾಗಿ – ನಿಜವಾದ ಪ್ರೀತಿ ಅಂದರೇನು?

ನನ್ನ ಪ್ರಕಾರ – ಪ್ರೀತಿ ಅಂದರೆ ಒಂದು ಉತ್ಕಟವಾದ ಭಾವ. ಅದಕ್ಕೆ ಸಾಲಿನ, ಮಾತಿನ ಮಹಿಮೆ ಬೇಕಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ ಅಂತರ್ಥ. ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ. ಕಷ್ಟ ಬಂದಾಗ ಹೆಗಲಾಗಿ ನಿಲ್ಲುವ ಆಶಯ. ಹಾಗಂಥ ಕಟ್ಟಿಹಾಕುವಂಥ ಬಂಧವೇನಲ್ಲ. ನೀನು ನಾನಿಲ್ಲದೆಯೂ ಖುಷಿಯಾಗಿರಬಲ್ಲೆ ಅಂತಾದರೆ- ಅದಾದರೂ ಸೈ.

ಒಟ್ಟಿನಲ್ಲಿ ನಿನ್ನ ಸಂತಸವೇ ನನ್ನ ಆಶಯ.

ನಾನು ನಿನ್ನ ಪ್ರೀತಿಸ್ತೀನಿ, ಹೇಳು ನೀ ನನಗಾಗಿ ಏನು ಮಾಡುವಿ? ನೀನೆಷ್ಟು ನನ್ನ ಪ್ರೀತಿಸ್ತೀ? ಅಂತ ಕೇಳುವುದು ಪ್ರೀತಿಯಾಗದು. ನಾನು ನಿನ್ನ ಪ್ರೀತಿಸ್ತೀನಾದ್ದರಿಂದ ನೀನೂ ನನ್ನ ಪ್ರೀತಿಸಬೇಕು ಅನ್ನುವುದು ವ್ಯವಹಾರವಾದೀತು. ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರದ ಭಾವ. ಹಾಗಾಗಿ ಒಂದು ಸಂಬಂಧದಲ್ಲಿ ನೀನೆಷ್ಟು ನೀಡಿದೆ ಅನ್ನುವುದರ ಮೇಲೆ ನಿನ್ನ ಪ್ರೀತಿ ನಿರ್ಧಾರಿತವಾಗಿರಬೇಕೇ ವಿನಾ ಸಂಬಂಧದಲ್ಲಿ ನೀನೆಷ್ಟು ಪಡಕೊಂಡೆ, ಬಂದ ಲಾಭಕ್ಕನುಗುಣವಾದ ಲೆಕ್ಕ ಅಲ್ಲ ಅದು.

ಹೀಗೆ ವಾಪಸ್ಸು ಏನನ್ನೂ ಬಯಸದೇ, ನಿನ್ನ ದುಃಖದಲ್ಲಿ ಜತೆಯಾಗಿ, ನಿನ್ನ ಸುಖದಲ್ಲಿ ಹಿತವಾಗಿ ಮರೆಯಾಗಿ ಇರುವುದು ಉನ್ನತ ಪ್ರೇಮ.
ನೀನು ಖುಷಿಯಾಗಿರಬೇಕು ಅದಕ್ಕೆ ನಾನು ನಿನ್ನ ಜತೆಯಲ್ಲಿರಲೇಬೇಕು (ಒಟ್ಟಿನಲ್ಲಿ ನೀನೇ ಬೇಕು)- ಅನ್ನುವುದು ಮಧ್ಯಮ.

ಅಂದರೆ ನಿಜವಾದ ಪ್ರೀತಿಯಲ್ಲಿ ಜೆಲಸಿ ಬರಬಾರದು. ತಾನು ಪ್ರೀತಿಸುವ ವ್ಯಕ್ತಿ ಆನಂದದಿದ್ದರೆ ಸಾಕು ಅನ್ನುವಂಥ, ಬೇರೆಯವರ ಜೊತೆಯಾದರೂ- ಬೇರೆಲ್ಲೋ ದೂರದಲ್ಲಿ ಇದ್ದಾದರೂ- ಒಟ್ಟಿನಲ್ಲಿ ಸಂತಸವಾಗಿದ್ದರೆ ಸಾಕು ಅನ್ನುವಂಥ ಮನಸ್ಥಿತಿ ಇರಬೇಕು.

ಆದರೆ ಇದು ಕೇಳುವಷ್ಟು / ಹೇಳುವಷ್ಟು ಸುಲಭವಲ್ಲ.

ಅಂಥ ಪ್ರೀತಿ ನಿಮಗೂ ದೊರಕಿದೆಯಾದರೆ ನಿಮಗಿದೋ ಶುಭಾಶಯ. ಪ್ರಪಂಚದಲ್ಲಿ ಬಾಳುತ್ತಿರುವ ಕೋಟಿ ಕೋಟಿ ಮನುಷ್ಯರಲ್ಲಿ ನೀವೇ ಅದೃಷ್ಟವಂತರು.

ಟಿಪ್ಪಣಿಗಳು
  1. Smitha ಹೇಳುತ್ತಾರೆ:

    ಎಲ್ಲೋ ಹಿಂದೆ ಓದಿದ ನೆನಪು love is a verb not an adjective ಅಂತ. ಅದರ ಹಿಂದಿನ ಸರಿ ಅರ್ಥ ತಿಳಿಯಲು ಬಹಳ ಸಮಯವೇ ಬೇಕಾಯಿತು. ನೀವು ಈ ಬರಹದಲ್ಲಿ ಸರಿಯಾಗಿ ಅರ್ಥೈಸಿದ್ದೀರ. ಅದು verb ಆಗಿರೋ ಕಾರಣ ಬಣ್ಣಿಸಲು ಕಷ್ಟ .

  2. ರಂಜಿತ್ ಹೇಳುತ್ತಾರೆ:

    ಹೌದು ಮೇಡಮ್, ದಿ ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್ ಪುಸ್ತಕದಲ್ಲಿ ಸ್ಟೀಫನ್ ಕೋವೆ ಬರೆದಿದ್ದದು.

    ಆ ಪುಸ್ತಕ ತುಂಬಾ ಚಂದ ಇದೆ, ಸಾಧ್ಯವಾದರೆ ಓದಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s