ಹೂವು ನೀಲಿ, ನಾನು ಮಾಲಿ..!
ಹೆಸ್ರು ರಂಜಿತ್ ಅಡಿಗ. ಬೇರೂರು ಕುಂದಾಪುರ. ಸದ್ಯಕ್ಕೆ ಬೆಂಗಳೂರು ನಿವಾಸಿ. ಬದುಕು, ಕೆಲಸ ನನ್ನನ್ನು ಕುಂದಾಪುರದಿಂದ ಹಿಡಿದು ಸಿಂಗಾಪೂರದವರೆಗೆ ಓಡಿಸಿದೆ.
ಚಿಕ್ಕ ವಯಸ್ಸಿಂದ ಓದುವ, ಬರೆಯುವ ಗೀಳು. ಶಾಲೆಯ ಗೋಡೆಯ ಮೇಲೆ, ತೋಡಿನ ಮೇಲೆ ಬಿಡುವ ಕಾಗದದ ದೋಣಿ, ಕುಡುಮಿ ವಿಧ್ಯಾರ್ಥಿಯ ಬೆನ್ನಿಗಂಟಿದ ಚೀಟಿ ಮೇಲೆ, ಕ್ಯಾಂಟೀನಿನ ಬೆಂಚುಗಳ ಮೇಲೆ, ಗಾಯ ಮಾಡಿಕೊಂಡ ಗೆಳೆಯನ ಕೈಯ ಪ್ಲಾಸ್ಟೆರ್ ಆಫ್ ಪ್ಯಾರಿಸ್, ಟೀಚರತ್ತ ನುಗ್ಗಿದ ಹಾಳೆಯ ಕ್ಷಿಪಣಿ, ಮೊಬೈಲ್ ಎಸ್ಸೆಮ್ಮೆಸ್ಸು, ತರಂಗ, ಸುಧಾ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಕ್ರಾಂತ ಕರ್ನಾಟಕ, ಮಂಗಳ, ಆರ್ಕುಟ್.. ಹೀಗೆ ಎಲ್ಲಾ ಕಡೆ ಸಾಹಿತ್ಯ ರಾರಾಜಿಸಿದ ನಂತರ, ಈ ಬ್ಲಾಗು ಒಂದು ಬಿಟ್ಟಿದ್ದಕ್ಕೆ ಬಹಳ ಖೇದವಾಗಿತ್ತು. ನವಿಲುಗರಿ ಬ್ರಾಂಡಿನ ಸೋಮನ (ದಯವಿಟ್ಟು ಅವನನ್ನೂ ಕ್ಷಮಿಸಿ ಬಿಡಿ!) ನೆರವಿನಿಂದ “ನೀಲಿಹೂವು” ಎಂಬ ಬ್ಲಾಗು ತೆರೆದು ಆ ಆಸೆಯನ್ನೂ ಪೂರೈಸಿದ್ದೇನೆ.
ಸಿನೆಮಾ, ಅಡುಗೆ, ಪರಿಸರ, ಸಾಹಿತ್ಯ ಅಂದರೆ ಭಾರಿ ಪ್ರೀತಿ. ಜಯಂತ್ ಕಾಯ್ಕಿಣಿ, ಯಂಡಮೂರಿ, ಬೇಂದ್ರೆ, ಜೋಗಿ, ಕೆ.ಟಿ.ಗಟ್ಟಿ ಯವರ ಬರಹಗಳು ಹೆಚ್ಚು ಇಷ್ಟ. ನಾಗತಿಹಳ್ಳಿ ಚಂದ್ರಶೇಖರ್ , ಸುನಂದಾ ಪ್ರಕಾಶ ಕಡಮೆ ಸಣ್ಣಕತೆಗಳೂ ಖುಷಿಕೊಡುತ್ತದೆ. ಅಪರೂಪಕ್ಕೆ ಪತ್ರಿಕೆಗಳಲ್ಲಿ ಬರೆವ ರಮೇಶ್ ಕೆದಿಲಾಯ ರ ಬರವಣಿಗೆಯೂ ಆಪ್ತ ಅನ್ನಿಸುತ್ತದೆ.
ಈ ಬ್ಲಾಗು ನನ್ನ ಒಳಗೆ ಕುದಿವ ಭಾವಗಳಿಗೆ, ಬರಯಲೇ ಬೇಕೆಂಬ ತುಡಿತಕ್ಕೆ ಶಮನ ನೀಡುತ್ತಿದೆ.
(ಈ ಬ್ಲಾಗಿನಲ್ಲಿರುವ ಎಲ್ಲಾ ಫೋಟೋಗಳೂ ಸ್ವಂತದ್ದಲ್ಲ, ಗೂಗಲ್ ನಿಂದ ಎತ್ತಿಕೊಂಡಿದ್ದು, ಆ ಎಲ್ಲಾ ಫೋಟೋಗ್ರಾಫರುಗಳಿಗೆ, ಪೈಂಟರುಗಳಿಗೆ ನನ್ನ ನಮ್ರ ಥ್ಯಾಂಕ್ಸ್. )
ಟಿಪ್ಪಣಿಗಳು
Hello
Really impressed by your writings.
Awaiting for your response….mesha.chin@gmail.com
Regards
Ramesha
ರಮೇಶ,
ನಿಮ್ಮ ಮೆಚ್ಚುಗೆಯ ಮಾತುಗಳೇ ನಮಗೆ ಬರೆಯಲು ಹುಮ್ಮಸ್ಸು ನೀಡುವುದು.
ಮೈಲ್ ಮಾಡಿರುವೆ.
ಪ್ರೀತಿಯಿರಲಿ.
Tumba tumba santhosha…nimma baraha nijakoo chenda ranjith.
please keep going…
Preetiyinda,
Sunil.
ಸುನಿಲ್,
ನಿಮ್ಮ ಮೆಚ್ಚುಗೆಯಿಂದ ಬಹಳ ಖುಷಿಯಾಯಿತು.
ಬರೆಯುತ್ತಿರುತ್ತೇನೆ, ನೀವೂ ಬರುತ್ತಿರಿ.
ಪ್ರೀತಿಯಿರಲಿ,
-ರಂಜಿತ್.
nimma one line stories na thumbaa miss maadkotaa iddare bahaLa jana Odugaru… avarellara paravaagi nanna binnavattaLe…
bega Ondu saalina kathegala series barali
ವಿಜಯರಾಜ್ ಜಿ,
ನೀವು ಕೇಳಿದ್ಮೇಲೆ ಇಲ್ಲ ಅನ್ನೋಕ್ಕಾಗುತ್ಯೇ? ಖಂಡಿತಾ ಇನ್ನು ಸ್ವಲ್ಪ ದಿನದಲ್ಲೇ ಹಾಕ್ತೀನಿ. ಬರೆದದ್ದನ್ನು ನನ್ನೊಳಗಿನ ವಿಮರ್ಶಕ “ಹಾಕಯ್ಯ.. ಪರ್ವಾಗಿಲ್ಲ ಅನ್ನೋ ಹಂಗೆ ಬರ್ದಿದ್ದೀಯಾ” ಅಂದ ಕೂಡ್ಲೇ ಹಾಕುವೆ.
ನಿಮ್ಮ ನಲ್ಮೆಯ ಮಾತುಗಳಿಗೆ ಥ್ಯಾಂಕ್ಸ್.
ಹಾಗೇ ಹೂ ತೋಟದಲ್ಲೊಂದು ಸುತ್ತು ಹೊಡೆಯುವಾಗ ಕಣ್ಣಿಗೆ ಬಿದ್ದಿದ್ದು ಈ ನೀಲಿ ಹೂವು. ಎಲ್ಲೆಲ್ಲೂ ಕಾಣ ಸಿಗುವ ಕೆಂಪು, ಹಳದಿ, ಬಿಳಿ ಹೂಗಳಿಗಿಂತ ಇದು ಖಂಡಿತ ಭಿನ್ನ..
ಅನಂತ ಅವರೇ,
ನೀಲಿಹೂವಿನ ಭಿನ್ನತೆ ನಿಮಗಿಷ್ಟ ಆಗಿದ್ದು ಸಂತಸ ತಂದಿತು. ಹೀಗೆಯೆ ಬರುತ್ತಿರಿ ಸಮಯವಾದಾಗ.
ಧನ್ಯವಾದಗಳು.
itteechege ishtondu impress maaduvantaha barahagalu kannige biddiralillaa….ree nim FAN aagbittideeni kanree..!!
ಉಷಾ ಮೇಡಮ್,
ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನನ್ನದೇನಿಲ್ಲ, ನಿಮ್ಮಂತವರ ಪ್ರೋತ್ಸಾಹವೇ ಬರೆಸುತ್ತಿರುವುದು. ಮುಂದೆ ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸುವೆ. ಬರುತ್ತಿರಿ.
ರಂಜಿತ್ ಕಾಲೇಜ್ನಲ್ಲಿ ನಿಮ್ಮ ಕೆಲ ಕವನಗಳನ್ನ ಓದಿದಾಗ ಇಸ್ಟವಾಗಿತ್ತು. ಆಮೇಲೆ ಎಲ್ಲೋ ಮರೆತೇ ಹೋಗಿದ್ರಿ. ಹಾಗೇ ಬ್ರೌಸ್ ಮಾಡುವಾಗ ನೀಲಿ ಹೂ ಸಿಕ್ಕಿತು, ವ್ಹಾ ನಿಜವಾಗ್ಲೂ amazing. ಅದರಲ್ಲೂ ಕವನಗಳಂತೂ ಸೂಪರ್. ಇಷ್ಟು ದಿನ ನಿಮ್ಮ ಬ್ಲಾಗ್ನ ನೋಡ್ದೆ ತುಂಬಾ ಮಿಸ್ ಮಾಡ್ಕೊಂಡೆ ಅನಿಸ್ತಿದೆ. ಒಂದೇ ಸಮನೆ ಕೊತ್ಕಂಡು ಓದ್ತಿದೀನಿ, ಹೀಗೆ ಬರೀತಿರಿ.
nice write ups, hige sumne kutide neeli hoovu siktu.kushiyaytu
Dear Ranjith,
You are an awesome writer…
your writings makes to feel very private by touching the inner feelings. You says many things which someone wanted to express but they don’t have skills. Keep writing sir. All the best. 🙂
nice one Sir.
ದೀಷ್ಮಾ, ಮಾಣಿರಂಜನ್
ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸು.
ದಯಾನಂದ,
ನಿಮ್ಮ ಕಾಮೆಂಟು ಕಂಡು ಬಹಳ ಖುಷಿ ಆಯಿತು.ನನಗೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಕೊಂಚ ಬೇಸರಾಗಿತ್ತು. ಲೇಖನ ಬರೆದರೂ ಬ್ಲಾಗಿಗೆ ಹಾಕುವುದು ಬೇಡ ಅನ್ನುವ ಆಲೋಚನೆ ಮೂಡಿತ್ತು. ನಿಮ್ಮ ಈ ಅನಿಸಿಕೆ ಮತ್ತು ಹತ್ತಿರದ ಕೆಲ ಗೆಳೆಯರ ಮಾತುಗಳು ಮತ್ತೆ ಸ್ವಲ್ಪ ಸ್ಪೂರ್ತಿ ಮೂಡಿಸಿವೆ.
ನಿಜವಾಗ್ಯೂ ನಿಮ್ಮ ಅನಿಸಿಕೆಗಳು ಮಹತ್ತ್ವವಾದ್ದು. ಧನ್ಯವಾದಗಳು.
ಕಾರ್ತಿಕ್,
ಕಾಲೇಜು ಸಮಯದಿಂದಲೇ ನನ್ನ ಹಿಂದೆ ಬಿದ್ದಿದೀರಿ ಎಂದಾಯ್ತು!:)
ಆಗ ಬರೆಯುತ್ತಿದ್ದಾಗ ಬರಹದ ಘಮ ಬೇರೆಯಾಗಿರುತ್ತಿತ್ತು.. ಈಗ ಕೊಂಚ ಬೇರೆ ಅಂತ ಅನ್ನಿಸ್ತಿದೆಯೇ?
ಆನಿಸಿದ್ದರೆ ಅದು ಬದುಕಿನ ಮಹಿಮೆ..:)
ಥ್ಯಾಂಕ್ಸ್.
ಬರೆಯುವ ಹಂಬಲವ,ತುಡಿತವ ಪೋಷಿಸಿ,ಪೂಣಿಸಿ ದೂರದ ಸಿಂಗಾಪುರದಿಂದ
ಕನ್ನಡದ ಕಂಪ ಹರಡುವ ನೀಲಿ ಹೂವ ಮಾಲಿ ರಂಜಿತ್ ಅಡಿಗರಿಗೆ
ನಮಸ್ಕಾರಗಳು.ನಾನು ಬ್ಲಾಗು ಆರಂಭಿಸಿದ ಹೊಸತರಲ್ಲಿ, ಬ್ಲಾಗು ಲೋಕಕ್ಕೆ
ನನಗೆ ಸ್ವಾಗತವ ಕೋರಿ moral support ನೀಡಿದ ನಿಮಗೆ ನಾ
ಚಿರಋಣಿ.
ನಿಮ್ಮ ಬರವಣಿಗೆಯ ಶೈಲಿ ಬಹಳ ಇಷ್ಟ.
ಇನ್ನೂ ಹೆಚ್ಚೆಚ್ಚು ಬರಹಗಳು ನಿಮ್ಮಿಂದ ಜಗದ ಮೂಲೆಮೂಲೆಗೂ ತಲುಪಲಿ..
ಬಿಡುವಿದ್ದಾಗ ಒಮ್ಮೆ ನನ್ನ ರಾಗನೌಕೆಗೆ ಭೇಟಿ ಕೊಡಿ.
(http://raganouke.wordpress.com)
ಇಂತಿ ತಮ್ಮ ಅಭಿಮಾನಿ
— ರಾಘವೇಂದ್ರ ಹೆಗಡೆ (‘ರಾಗನೌಕೆ’ಯಿಂದ )
ಉತ್ತಮ ಬರವಣಿಗೆಗಳು.
ಹೀಗೆಯೇ ಮುಂದುವರಿಯಲಿ.
-ಆಸು ಹೆಗ್ಡೆ
Nimma Blogannu Regularagi ododu nanna weakness barahagalige hosadada rupa kottiruva nimma parichaykke nanu hatorediddene nanna haturakke ondu full stop kottu nannannu dhanyanagisu shiva harish8feb@gmail.com Idu nanna E-vilasa .
ರಾಘವೇಂದ್ರ ಹೆಗಡೆ,
ಇರೋ ಊರು ಸಿಂಗಾಪೂರು ಆದರೇನು?
ಒಳಬೇರು ಕುಂದಾಪೂರೇ ಅಲ್ಲವೇ?!
ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಕೊರೀದೇ ಬರೀತಿರ್ತೀನಿ, ಮರೀದೇ ಬರುತ್ತಿರಿ..:)
@ಅಸು ಹೆಗ್ಡೆ,
ಧನ್ಯವಾದಗಳು ಸರ್.
@ಹರೀಶ್,
ನನ್ನ ಬ್ಲಾಗು ಪೂರ್ತಿಯಾಗಿ ಓದಿಯಾದ ಮೇಲಾದರೂ ನಿಮ್ಮ “ಹಾತುರ” ಆತುರವಾಗಲಿ ಎಂದು ಹಾರೈಸುತ್ತೇನೆ…:)
ನಿಮಗೆ ಈಗಲೇ ಮೈಲು ಮಾಡಿ ಧನ್ಯನಾಗುತ್ತೇನೆ ಶಿವಾ..
ಥ್ಯಾಂಕ್ಸ್.
really impressed by your blog, n your style of writing.good going. congrats
nanna tharane innu kelavu barahagara mitraru singapruradalliddare endu tilidu santoshavayitu ranjit avare.
ಡಿ. ಎಸ್. ರಾಮಸ್ವಾಮಿಯವರೇ,
ನಿಮ್ಮಂಥವರು ನನ್ನ ಬ್ಲಾಗಿಗೆ ಬರುವುದು ನನಗೆ ಹೆಮ್ಮೆ. ನಿಮ್ಮ ಕಾಮೆಂಟು ನೋಡಿ ನನ್ನ ಕಾಲು ಭೂಮಿ ಮೇಲಿಲ್ಲ!
@ರಂಜನಾ,
ನಿಮ್ಮ ಥರ ಅನ್ನಬೇಡಿ,
ನೀವು ಹಾಗಂದರೆ ಅದು ನನಗೆ ದೊಡ್ಡಮಾತುಗಳು
ನಾನಂತೂ ಬರಹಲೋಕದ ತುಂಬುಬೆಳಕಿನಲಿ ಚಿಕ್ಕ ಮಿಣುಕು ಹುಳು!
baraha thmba chennagide
ನವಿರಾದ ಬರಹಗಳು …
ಭಾವನೆಗಳ ಬಸಿವ ಪದಗಳು…
ಕನಸುಗಳಲ್ಲಿ ತೇಲಿಸುವ ಬರಹಗಳು…
Hi Ranjith,
ee blogu gigu hanthavella odhak adav anth nang gotthagidda itthithlgiri..
manne manne papernyag nim Neelihoovina bagge bardiddu odhidhmyale..
hanga sumna kunthag ondh sala try madun anth try maadide..
idonthara nanga chata adanga agibittetri.. na blog antha odhakatthidda nimda first ri..
neev bardiddu odhak baal chandh adavu mattha.. valaga andra deep heartge muttuvang adavri..
hinga barithirri..
preeti inda,
vk
nimma baravnige baravnige bavneglalli hrlid huvin hage ide. prakash.b.jalahalli
tumba ista aytu , heege munduvariyali
ಪ್ರೀತಿಯ ರಂಜಿತ್ ಅಡಿಗ ಇವರಿಗೆ,
ನಮಸ್ಕಾರಗಳು. ಇವತ್ತು “ವಿಜಯ ಕರ್ನಾಟಕ” ದಿನಪತ್ರಿಕೆ ಇಂದ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು.
ನಿಮ್ಮ ತಾಣ “https://neelihoovu.wordpress.com” ಕ್ಕೆ ಭೇಟಿ ಕೊಟ್ಟೆ. ನಿಮ್ಮ ಲೇಖನಗಳು ಬಹಳ ಚೆನ್ನಾಗಿ ಇವೆ.
ದಯವಿಟ್ಟು ನಿಮ್ಮ ಬರವಣಿಗೆ ಮುಂದುವರೆಸಿ.
ಇಂತಿ ವಿಶ್ವಾಸಗಳೊಂದಿಗೆ,
ವಿಜಯ ಕುಲಕರ್ಣಿ
Super kanri Nimma Hobbey super,,
i lik ur blog
ಚೆನ್ನಾಗಿದೆ ಸರ್, ತುಂಬಾ ಆಪ್ತ ಶೈಲಿ ತಮ್ಮದು,ದೇವರು ಒಳ್ಳೆಯದನ್ನೆ ಮಾಡಲಿ ನಿಮಗೆ, ಈ ಜೀವನ ಪ್ರೀತಿ ಯಾವತ್ತೂ ನಿಮ್ಮೊಟ್ಟಿಗಿರಲಿ ಧನ್ಯವಾದಗಳು