ಇನ್ನು ಮುಂದೆ ಎಂಥ ದುಃಖಕ್ಕೂ
ಅಳಲಾರೆ ಅಂತ
ಖಡಾಖಂಡಿತವಾಗಿ ಅಂದುಕೊಳ್ಳುತ್ತಿದ್ದಾಗ
ಅದೆಷ್ಟೋ ಹೊತ್ತಿನಿಂದ
ಕಾಯುತ್ತಿದ್ದಂತೆ
ಮೋಡಗಳು ನನ್ನ ದೋಚಿದವು!
*****
ನಿನ್ನ ನೋಟವೊಂದಕ್ಕೇ
ಈ ಪರಿಯ ಅಮಲು
ಅನುಮಾನವೇ ಇಲ್ಲವೆನಗೆ
ಇದನು ಪ್ರೀತಿಯೆನಲು..!
****
ನಿನ್ನ ನಿರೀಕ್ಷೆಯಲಿ
ಕೆಲವೊಮ್ಮೆ ಕಾಲವನ್ನು
ಪೆಂಡ್ಯುಲಮ್ ಗೆ ನೇಣುಹಾಕಿ
ಅದು ಒದ್ದಾಡುವುದನ್ನು
ಸುಮ್ಮನೆ
ನೋಡುತ್ತಿರುತ್ತೇನೆ.
***
ಎಷ್ಟೋ ಕಷ್ಟ ಪಟ್ಟ
ಬಳಿಕ ಒಬ್ಬ ಚಂದಿರನ ಮೇಲೆ ಕಾಲಿಟ್ಟ
ಘಳಿಗೆಯಲ್ಲಿ ಜನರೆಲ್ಲಾ
ಸಂಭ್ರಮಿಸುತ್ತಾರೆ,
ಜತೆಯಲ್ಲಿದ್ದಾಗ ನಾವಿಬ್ಬರೂ
ನಕ್ಷತ್ರಲೋಕದಲ್ಲಿ ವಿಹರಿಸುವುದು
ಯಾರಿಗೂ ತಿಳಿದಿಲ್ಲ ಅನಿಸುತ್ತದೆ!
***
ಈ ಹನಿಗಳು ಇಂದು (೧೪ ಫೆಬ್ರವರಿ ೨೦೧೦) ವಿ.ಕ. ದ ಲವಲವಿಕೆಯಲ್ಲಿ ಪ್ರಕಟ ಆಗಿದೆ.
ವಿ.ಟಿ. (ವಿಶೇಷ ಟಿಪ್ಪಣಿ) : ನಾನು ವೆಸ್ಟ್ ಇಂಡೀಸ್ ನಲ್ಲಿಲ್ಲ, ವೆಸ್ಟ್ ಇಂಡೀಸ್ ನವನಲ್ಲ!..:)