ಬರವಣಿಗೆ : ತನ್ನೊಳಗಿನ ಭಾವಗಳಿಗೆ ನ್ಯಾಯ ದೊರಕಿಸಿಕೊಡಲು ಬರಹಗಾರ ಮಾಡುವ ಪದಯಾತ್ರೆ.
ನೀಲಾಂಜನ : ಅಮ್ಮ ಹಚ್ಚಿಟ್ಟ ನೀಲಾಂಜನಕ್ಕೆ ರಾತ್ರಿ ಅಲ್ಲಾಡುತ್ತಿದೆ!
ಸಾವು : ಕರೆಯದೇ ಬಂದವರು, ಕರೆದೊಡನೆ ಹೊರಡುವರು
ಲಾಂದ್ರ : ಪವರ್ ಕಟ್ ಸಮಯದಲ್ಲಿ ಮನೆಯಾಗಸದ ಚಂದ್ರ.
ಚಿಗುರು : ಸತ್ತು ಬಡಗಿಯ ಕೈಯಲ್ಲಿ ಭರ್ಜರಿ ಸರ್ಜರಿ ಮಾಡಿಸಿಕೊಂಡ ಕೊಳಲು ತನ್ನೆಲ್ಲಾ ತೂತುಗಾಯದ ಮಧ್ಯೆಯೂ ಎಲ್ಲರ ಎದೆಯೊಳಗೆ ರಾಗವಾಗಿ ಚಿಗುರೊಡೆದಿದೆ.
ವಾಸ್ತವ : ರಾತ್ರಿ ಮೆಲ್ಲ ಬಂದು ಕನಸು ಕದಿಯದಿರಲಿ ಎಂದು ರೆಪ್ಪೆಯ ಲಾಕರಿನೊಳಗಿಟ್ಟಿದ್ದೆ; ಮುಂಜಾವು ಕಣ್ಣೆದುರೇ ಎಲ್ಲಾ ಲೂಟಿಗೈದಿತು.
ಮಿನುಗು : ಚಂದಿರನಿಲ್ಲದ ರಾತ್ರಿಗೆ ಕತ್ತಲ ಆಗಸದಂಗಳದಲ್ಲಿ ಭಯದಿಂದ ನಡುತಿದೆ ನಕ್ಷತ್ರಗಳು.
ಚಿಗುರು : ನೀರ ಹನಿ ಬೇರಿಗಿತ್ತ ಮುತ್ತಿಗೆ ಕೊರಡು ಕೊಂಬೆಗೆ ಮೂಡಿದ ರೋಮಾಂಚ!
ಚಕ್ರ : ಅವನಿಗೆ ಬಿದ್ದ ಕನಸಲ್ಲಿ, ಹಗಲಾಗಿ ಕೆಲಸಕ್ಕೆ ಹೋಗಿ ಸಂಜೆ ಸುಸ್ತಾಗಿ ಬಂದು ನಿದಿರೆಯಲಿ ಮುಳುಗಿ ಕನಸು ಕಾಣತೊಡಗಿದ.
(ಚಿತ್ರಕೃಪೆ : ಇಲ್ಲಿಂದ )