ಸಿಕ್ಕಿದ್ದಕ್ಕೆಲ್ಲಾ ಕಾರಣವಿತ್ತು
ಒಮ್ಮೆ ಸಿಗು ಗೆಳೆಯಾ
ಹಾಗೆ ಸುಮ್ಮನೆ
*****
ಹೂವು ಸತ್ತು
ತುಂಬಾ ಹೊತ್ತಾಯ್ತು
ಪರಿಮಳವಿನ್ನೂ ಅರಳುತ್ತಿದೆ..
******
ಅವಳೂ ಅಂದಳು
ನಾನೂ ಅನ್ನುತ್ತಿದ್ದೆ
ಮೌನ ಇನ್ನಷ್ಟು ಆಳವಾಗುತ್ತಿತ್ತು..
*****
ಗೋಡೆ, ಮಾಡಿನಿಂದ
ಆಗದಿದ್ದ ಮನೆ, ಕಿಟಕಿ-ಬಾಗಿಲು
ಗಳಿಂದ ಆಯಿತು.
******
ಮೀಟರುಗಟ್ಟಲೆ ಚಿಗುರಿಸಿದ
ಮಳೆಯನ್ನು
ಸೆಂಟಿಮೀಟರುಗಳಿಂದ ಅಳೆದರು.
****
ಕಡಲಿಗೆ ಬಿದ್ದ ಆಗಸ
ನೀಲಿ ನೀಲಿಯಾಗಿಬಿಡ್ತು
ಪುಟ್ಟಿಯ ಕಣ್ಣಲ್ಲಿ
****
ಭೇಟಿಯಾಗದಿರು ನನ್ನ
ಕನಸಲ್ಲಿ ಸಾಲ
ಇಸ್ಕೊಂಡವನ ಥರ…
****
ಸಿಮೆಂಟು, ಇಟ್ಟಿಗೆ
ಗೋಡೆ ಮಾಡು ಎಲ್ಲ ಗಟ್ಟಿ
ಒಳಗಿನ ಮೌನವೊಂದೇ ದ್ರವ
****
baree chennagide emdare nimma saalugalige mosa maadida haagaagabahudu. bahala chennide 🙂
wah wah 🙂
Kalpane thumba chennagide
@ಸುಬ್ರಹ್ಮಣ್ಯ ಹೆಗ್ಡೆ, @ಸುಖೇಶ್, ಧನ್ಯವಾದಗಳು ಸರ್.
@ಅನಾನಿಮಸ್, ಕಾವ್ಯದ ಮೂಲಗುಣ, ಬೇರು ಕಲ್ಪನೆಯೇ ಅಲ್ಲವೇ, ಹಾಗಾದಲ್ಲಿ ಇಷ್ಟವಾದ್ದು ಹೈಕು ನಾ ಅಥವ ಬರೀ ಬೇರಾದ ಕಲ್ಪನೆ ನಾ?
ಕವಿಯ ಸು೦ದರ ಕಲ್ಪನೆಯಿ೦ದ ಒಡಮೂಡಿದ ಸೊಗಸಾದ ಹೈಕುಗಳು..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಅಣ್ಣ,
ತುಂಬಾ ತಿಂಗಳುಗಳ ನಂತರ ನೀಲಿ ಹೂ ನ ನೋಡೋದಕ್ಕೆ ಬಂದೆ, ತುಂಬಾನೇ ಖುಷಿ ಕೊಡ್ತು ನಿಮ್ಮ ಬರಹ
ಅಮೋಗವಾಗಿವೆ ಹಾಯ್ಕುಗಳು.
-ಇಂಚರ
ಮೀಟರುಗಟ್ಟಲೆ ಚಿಗುರಿಸಿದ
ಮಳೆಯನ್ನು
ಸೆಂಟಿಮೀಟರುಗಳಿಂದ ಅಳೆದರು.
ಕವಿಗಳು ಇಂಜಿನಿಯರಿಂಗ್ ಕಲಿತು ಆಗುವ ಅನಾಹುತ ನೋಡಿ 😛
ಇವು ಹೈಕುಗಳಲ್ಲ. ಹೈಕುಗಳೆಂದರೆ ಜಪಾನಿ ಕಾವ್ಯ ಪ್ರಕಾರದ ರೀತಿಯಲ್ಲಿ ಹದಿನೇಳು ಅಕ್ಷರಗಳ ಒಂದು ಗುಚ್ಛ. ಆ ಬಗೆಯಲ್ಲಿ ಇವು ಹೈಕುಗಳಲ್ಲ ಹನಿಕವಿತೆಗಳೆನ್ನಬಹುದು ಅಷ್ಟೆ
ಇವು ಹೈಕುಗಳಲ್ಲ. ಜಪಾನಿ ಕಾವ್ಯ ಪ್ರಕಾರದ ರೀತಿಯಲ್ಲಿ ಹೈಕುಗಳೆಂದರೆ ಹದಿನೇಳು ಅಕ್ಷರಗಳುಳ್ಳ ಗುಚ್ಛ. ಇವು ಹನಿಕವಿತೆಗಳೆನ್ನಬಹುದಷ್ಟೆ
ಓಕೆ ಸರ್