ಗೆಳತಿಗೆ!

Posted: ಜನವರಿ 31, 2017 in ಕವಿತೆ, ಕವಿತೆ ತರಹ

 

ಮಕರಂದವ ಬಿಟ್ಟು ಅಂದವನ್ನೇ ಸವಿಯುತ್ತಾ ನಿಂತುಬಿಟ್ಟಿವೆ ದುಂಬಿಯಿಂದು
ನೀನು
ದಾರಿಹೋಕನಿಗೆ ಹಳೆಯ ನೆನಪೊಂದನ್ನು ಮೀಟಿಸಿದ ಹೂವು

ಮಧುರ ನಿದಿರೆಯೊಂದನು ದಾಟಿ ಬಂದ ಕನಸು
ನೀನು,
ದಯವಿಟ್ಟು ಚಿವುಟದಿರಿ ಪ್ಲೀಸ್, ಮುಂದುವರಿಯಲಿ ಈ ಕನಸು ಬದುಕಿನುದ್ದಕ್ಕೂ

Image result for invicible strings between 2 ppl

ನನ್ನನ್ನು ನಿನ್ನತ್ತ ಸೆಳೆಯುತ್ತಿರುವ ಯಾವುದೋ ಒಂದು ಮಾಯೆಯಿದೆ
ನಂಬಲಾರರೇನೋ ಯಾರೂ
ಜೊತೆಗೆ ನೀನೂ,
ನಿನ್ನ ನೋಟಕ್ಕೆ ನನ್ನಾತ್ಮದ
ಜಂಘಾಬಲವನ್ನೇ ಅಲ್ಲಾಡಿಸುವ
ಶಕ್ತಿಯಿದೆಯೆಂದರೆ.

ಪ್ರೀತಿ ಸ್ನೇಹವೆಂದೆಲ್ಲಾ ಹೆಸರುಗಳ ಎಂಜಲು ಬೇಡ ಈ ಸಂಬಂಧಕ್ಕೆ,
ನಿನ್ನೊಂದಿಗಿರುವ ಕೆಲ ಕ್ಷಣಗಳ ಕಡ ಸಾಕು
ಮನದ ಜೋಳಿಗೆ ತುಂಬೀತು, ಸಾಕಷ್ಟು ಉಳಿದ ಬದುಕಿಗೆ.

ಬೇಕಿಲ್ಲ ನಿನ್ನ ಹರುಷದ ಸಮಯ,
ದುಃಖವಾದೊಡೆ ನನ್ನ ನೆನಪಾದರೆ ಸಾಕು, ಅದುವೆ ನನಗೆ ಹೆಮ್ಮೆ

ಟಿಪ್ಪಣಿಗಳು
  1. Sushrutha Dodderi ಹೇಳುತ್ತಾರೆ:

    ಸಖತ್ ರಂಜಿತ್! ಈ ಸಿನೆಮಾ ನೋಡಿ ನಾನೂ ಒಂದು ಕವನ ಬರ್ದಿದಿದ್ದೆ. ನಿಮ್ದು ಓದಿ ನಂದು ಅಮೆಚೂರ್ ಅನ್ನಿಸ್ತು. 😦

    http://hisushrutha.blogspot.in/2011/06/blog-post_25.html

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s