ನಾ ನಿನ್ನ ಪಾದರಕ್ಷೆಯಾಗಬೇಕು,
ಏಳು ಮಲ್ಲಿಗೆ ತೂಕವನ್ನೆತ್ತಿಕೊಂಡು
ಎರಡಿಂಚು ಮೇಲೆಯೇ
ಗಾಳಿಯಲಿ ನಡೆಸಬೇಕು…
ಎದುರು ಸಿಗುವ
ವಾಚ್ ಮ್ಯಾನ್ ಆಗಬೇಕು,
ಕ್ಷಣಕಾಲವಾದರೂ ಮೂಡುವ
ನಿನ್ನ ನಗುವಿಗೆ ದಿನಾ
ಸಲಾಮು ಮಾಡಬೇಕು..
ನಿನ್ನ ಬಣ್ಣಿಸುವ ಕವಿಯಾಗಬೇಕು,
ಓದುಗರೆಲ್ಲಾ “ಅಹಾ!
ಎಂಥ ಹುಡುಗಿಯಿರಬೇಕು ಅವಳು”
ಎಂದು ಹೊಟ್ಟೆ ಉರಿಸಿಕೊಳ್ಳುತಿರಬೇಕು…
ಬಸ್ಸಿನಲಿ ಸೀಟು ಸಿಗದ ಚಿಕ್ಕ
ಮಗುವಾಗಬೇಕು,
ನೀ ಬರಸೆಳೆದು ಕೂರಿಸಿಕೊಂಡಾಗ
ಮಡಿಲ ಮುದದ ಸವಿಯ
ಮನಸಾರೆ ಉಣ್ಣಬೇಕು…
ಕೊನೆಯ ಪಕ್ಷ
ನಿನ್ನ ಕಂಬನಿಯಾದರೂ ಆಗಬೇಕು
ನನ್ನ ನಾ ಸಾಯಿಸಿಕೊಳ್ಳುತ್ತಾ
ನಿನ್ನೊಳಗಿನ ದುಃಖವನು
ಒಂದು ಹನಿಯಷ್ಟಾದರೂ
ಕಡಿಮೆ ಮಾಡಬಲ್ಲವನಾಗಬೇಕು!
😦 …………….
ನೀವು ಇದಕ್ಕಿಂತ ಚಂದದ ಕವನ ಬರೆಯಬಲ್ಲಿರಿ. ಆದರೂ..
ಕೊನೆಯ ಪಕ್ಷ
ನಿನ್ನ ಕಂಬನಿಯಾದರೂ ಆಗಬೇಕು
ನನ್ನ ನಾ ಸಾಯಿಸಿಕೊಳ್ಳುತ್ತಾ
ನಿನ್ನೊಳಗಿನ ದುಃಖವನು
ಒಂದು ಹನಿಯಷ್ಟಾದರೂ
ಕಡಿಮೆ ಮಾಡಬಲ್ಲವನಾಗಬೇಕು! ಈ ಸಾಲು ಇಷ್ಟವಾಯ್ತು.
ಪ್ರೀತಿಯಿಂದ
-ವೈಶಾಲಿ
ರಂಜಿತ್,
ಏಳು ಮಲ್ಲಿಗೆ ತೂಕವಿರುವ ನಿನ್ನ ಕನಸಿನ ಹುಡುಗಿಯ ಬಗ್ಗೆ
ಎಂಥ ಹುಡುಗಿಯಿರಬೇಕು ಅವಳು
ಎಂದು ಹೊಟ್ಟೆ ಉರಿಸಿಕೊಲ್ಲುತಿರು ವಂತೆ ಮಾಡುವಲ್ಲಿ ಖಂಡಿತ ಯಶಸ್ವಿಯಾಗಿದೆ,
ಹಾಗೆ ಸ್ವಲ್ಪ ಸಂಶಯ ಕೂಡಾ!!!
bala ಅವರು ಹೇಳಿದ್ದು ಸರಿ. ಮತ್ತೊಂದು ನಿಜ ಏನೆಂದರೆ ಈ ಬ್ಲಾಗ್ ಓದಿ ಓದಿ ಆ ಹುಡುಗಿಯ ಬಗ್ಗೆ ನಂಗೂ ಸ್ವಲ್ಪ ಹೊಟ್ಟೆಕಿಚ್ಚು ಶುರುವಾದ ಹಾಗಿದೆ! 😉
ವೈಶಾಲಿಯವರೇ
ನಿಜವಾಗಿ ಆ ಹುಡುಗಿ ಇರುವಳು ಎಂಬ ನಂಬಿಕೆ ನಿಮಗಿದೆಯೇ ಅದೂ ಏಳು ಸುತ್ತಿನ ಮಲ್ಲಿಗೆ ತೂಕವಿರುವವಳು???
ನಂಬಿಕೆಯೇನೋ ಇಲ್ಲ….. ಆದರೆ ನೀಲಿಹೂವಿನ ಇಷ್ಟೆಲ್ಲ ಪ್ರೀತಿ, ಹೊಗಳಿಕೆ ಆ ಹುಡುಗಿಯನ್ನ ಮಲ್ಲಿಗೆ ತೂಕಕ್ಕೆ ಇಳಿಸಿ, ಆಕಾಶಕ್ಕೇರಿಸಿರಬಹುದಾ ಅಂತಾ ! 🙂 🙂
ಕವನದ ತೂಕ ಏಳು ಮಲ್ಲಿಗೆ ತೂಕಕ್ಕೆ ಇಳಿದಂತಿದೆ? ಕನಸೇನೋ ಏನೋ ಚೆನ್ನಾಗಿದೆ. ಆದರೆ, ತೀವ್ರತೆ ಅದಕ್ಕೆ ಸಾಥ್ ಕೊಡುವಲ್ಲಿ ಯಶಸ್ವಿಯಾಗಿಲ್ಲ ಅನಿಸುತ್ತಿದೆ ರಂಜಿತ್. ’ಅವಳನ್ನು ರೆಪ್ಪೆಯೊಳಗಿಟ್ಟು ಪೋಷಿಸುವೆ, ಅವಳ ಕಣ್ಗಳ ಮೂಲಕ ಜಗವ ಕಾಣುವೆ’ ಎಂಬಿತ್ಯಾದಿ ಮಾತುಗಳು ತೂಕವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದವೇನೋ.
ಏಕೆಂದರೆ, ನಮಗೆ ಇಂತಹ ಸಾಲುಗಳು ಇಷ್ಟವಾಗುತ್ತವೆ. ಅನುಮಾನ ಬಂದರೆ ವೈಶಾಲಿಯವರ ಪ್ರತಿಕ್ರಿಯೆ ನೋಡಿ.
ಏಕೋ, ನಿಮ್ಮ ವಿರಹ ಗೀತೆಗಳೇ ಹೆಚ್ಚು ಆಪ್ಯಾಯಮಾನ. ಕೀಟ್ಸ್ ಹೇಳಿದಂತೆ (ಅವನೇ ಇರಬೇಕು) our sweetest songs are those which tell our saddest thoughts ನೀವು ವಿರಹಗೀತೆಗಳನ್ನು ಸೊಗಸಾಗಿ ಬರೆಯುತ್ತೀರಿ.
ಏಳು ಮಲ್ಲಿಗೆ ತೂಕದವಳನ್ನು ಎತ್ತಲು ಇನ್ನಷ್ಟು ಶ್ರಮಪಟ್ಟಿದ್ದರೆ ಉತ್ತಮವಾಗುತ್ತಿತ್ತು ಅಂತ ಅನಿಸುತ್ತಿದೆ. ಬೇಸರ ಮಾಡಿಕೊಳ್ಳಬೇಡಿ.
ಕೊನೆಯ ಪಕ್ಷ
ನಿನ್ನ ಕಂಬನಿಯಾದರೂ ಆಗಬೇಕು
ನನ್ನ ನಾ ಸಾಯಿಸಿಕೊಳ್ಳುತ್ತಾ
ನಿನ್ನೊಳಗಿನ ದುಃಖವನು
ಒಂದು ಹನಿಯಷ್ಟಾದರೂ
ಕಡಿಮೆ ಮಾಡಬಲ್ಲವನಾಗಬೇಕು!
ee saalugaLu iddee kavanadalli kammiyaada
teevrateyannu ekdam hecchisibittive….
good one
ನೀವು ತುಂಬಾ ಚನ್ನಾಗಿ ಬರಿತಿರ, ನಿಮ್ಮ ಸ್ಪೂರ್ತಿ ಯಾರಂತ ತಿಳಿಯಬಹುದೇ?
ಅಯ್ಯೋ ಹೀಗೆಲ್ಲಾ ಹೆಚ್ಚು ಬರೀಬೇಡಿ… ಯಾಕೋ ನಂಗೆ ನಿಜಕ್ಕೂ ಹುಡುಗಿಯರು ಹಾಗಿರ್ತಾರಾ ಅಂತ ಸಂಶಯ ಶುರುವಾಗಿಬಿಡುತ್ತೆ. ಆಮೇಲೆ ಆಕೆಯನ್ನು ಮೆಚ್ಚಿಸೋದಕ್ಕೆ ಇಷ್ಟೆಲ್ಲದರಲ್ಲಿ ಏನನ್ನಾದರೂ ಮಾಡಬೇಕು ಅನ್ನಿಸೋಕೆ ಶುರುವಾಗಿಬಿಟ್ಟೀತು!
ಅನ್ಯಾಯವಾಗಿ ಬೆಂಗಳೂರಿನ ಮೂಲೆಯೊಂದರ ಹುಡುಗನೊಬ್ಬನ ನೆಮ್ಮದಿಯನ್ನು ಹಾಳುಮಾಡಿದ ಕಳಂಕ ನಿಮಗೆ ಅಂಟಿಕೊಂಡೀತು ಜೋಕೆ ಜೋಕೆ ಜೋಕೆ!
ಸುಪ್ರೀ
ಪಲ್ಲವಿ ಮತ್ತು ವೈಶಾಲಿ ಮೇಡಂ,
ನಿಮಗೆ ನಿರಾಸೆಗೊಳಿಸಿದ್ದರೆ ದಯವಿಟ್ಟು ಕ್ಷಮಿಸಿ. ಇನ್ನೊಮ್ಮೆ ಹಾಗೆ ಮಾಡದಿರುವ ಪ್ರಯತ್ನ ಮಾಡುವೆ.
ಬೇಸರವೇನಿಲ್ಲ. ನಾವೆಲ್ಲಾ ಬದುಕುವುದು, ಬರೆಯುವುದು ಬೆಳೆಯುವುದಕ್ಕೋಸ್ಕರವೇ ಅಲ್ಲವೆ? ನೀವು ಹಾಗೆ ಹೇಳಿದರಷ್ಟೇ ತಿದ್ದಿಕೊಳ್ಳಲು ಸಾಧ್ಯ ಅಲ್ಲವೆ?
ಆದರೆ ನಿಮ್ಮ ಈ ಅನಿಸಿಕೆಗಳು ನಿಮ್ಮ ಹಿಂದಿನ ಎಲ್ಲಾ ಹೊಗಳಿಕೆಗೆ ಬೆಲೆ ತಂದಿತ್ತವು.
ಹೀಗೇ ನನ್ನನ್ನು ಬೆಳೆಸುತ್ತಿರಿ.
ಖಂಡಿತಾ ನಿಮ್ಮ ನಿರಾಶೆಗೊಳಿಸದಿರಲು ಶ್ರಮ ಪಡುವೆ…
ಪ್ರೀತಿಯಿರಲಿ..
ಪಲ್ಲವಿ,
ಎನ್ ಮೇಡಂ.. ವಿರಹ ಕವಿತೆಗಳು ಇಷ್ಟ ಅಂತಿದ್ದೀರಿ…ಉದ್ದೇಶ, ಕಾರಣ ತಿಳಿದುಕೊಳ್ಳಬಹುದಾ??:)
ಬಾಲಕೃಷ್ಣ ಮತ್ತು ವೈಶಾಲಿ,
ಈಗಿನ ಹುಡುಗೀರು ಬರೀ ಬರ್ಗರ್, ಚಾಕಲೇಟು ತಿಂತಾರೆ, ಎಲ್ಲಿಂದ ಬರಬೇಕು ಹೇಳಿ ಏಳು ಮಲ್ಲಿಗೆ ತೂಕ?:)
ಅದೇನಿದ್ದರೂ ಅವರ ನೆನಪುಗಳ ತೂಕವಷ್ಟೇ ನಮ್ಮ ಎದೆಯಲ್ಲಿ!
ಆದರೆ ಬಾಲಕೃಷ್ಣ ಅವರ ಸಂಶಯ ಎಂಥಾದ್ದು ಅಂತ ಅರ್ಥವಾಗಲಿಲ್ಲ…
ವೈಶಾಲಿ ಮೇಡಂ,
ಹೊಟ್ಟೆಕಿಚ್ಚು ಪಡುತ್ತಾ ನೀವು ಕವನದ ಮೂರನೇ ಪ್ಯಾರಗ್ರಾಫ್ ನಲ್ಲೇ ಉಳಿದುಬಿಟ್ಟಿರಿ. ನಾನು ಕಂಬನಿಯಾಗಿ ಕೊನೆಯ ಪ್ಯಾರ ವನ್ನೂ ದಾಟಿಯಾಗಿದೆ..:)
*********
ವಿಜಯರಾಜ್,
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ್ ಸರ್…
*******
ಗುರುರಾಜ್ ರವರೇ,
ಸ್ವಾಗತ ನನ್ನ ಚಿಕ್ಕ ತೋಟಕ್ಕೆ.
ಸ್ಪೂರ್ತಿ ಯನ್ನು ಒಬ್ಬರಿಗೇ, ಒಂದು ವಸ್ತುವಿಗೇ ಹೇಗೆ ಸೀಮಿತಗೊಳಿಸಲಿ ? ಪ್ರಪಂಚದ (ನಾನು ತಿಳಿದಷ್ಟು ) ಪ್ರತಿಯೊಂದು ವಸ್ತುವನ್ನು ಪ್ರೇರಣೆಯಾಗಿ ಪಡೆದಿದ್ದೇನೆ. ಬಾಳಿನ ದಾರಿಯಲಿ ಸಿಕ್ಕ, ಸಿಗುತಿರುವ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಒಳ್ಳೆಯ ವಿಷಯವನ್ನು ಕಡ ತೆಗೆದುಕೊಳ್ಳುತ್ತಿದ್ದೇನೆ; ಸ್ಪೂರ್ತಿ ಪಡೆಯುತ್ತಿದ್ದೇನೆ.
ಸುಪ್ರೀ,
ನೀವು ಇಂಜಿನೀರಿಂಗ್ ಕಾಲೇಜಿನ ವಿದ್ಯಾರ್ಥಿ. ಅದೂ ಬೆಂಗಳೂರು ಬೇರೆ! ನಿಮಗೆ ಹುಡುಗೀರು ನಿಜಕ್ಕೂ ಹಾಗಿರ್ತಾರಾ ಅಂತ ಅನುಮಾನ ಮೂಡಿದ್ದು ಅಚ್ಚರಿ ತರಿಸಿತು..:)
ಅಂದ ಹಾಗೆ ’ಸುಪ್ರೀ ಗೆ ಹಾಗನ್ನಿಸುವ ಹಾಗೆ ಬರೆದಿದ್ದೀರಲ್ರೀ .. ನೀವ್ ಗ್ರೇಟ್ ’ ಅಂತ ನಿಮ್ಮ ಅನೇಕ ಗೆಳೆಯರ ಕಾಂಪ್ಲಿಮೆಂಟ್ ಗಳ ಮಹಾಪೂರವೇ ಬರ್ತಿದೆಯಲ್ಲಾ 🙂
ಅದ್ಕೇ ಒಂದು ಡಿಸ್ಕ್ಲೇಮರ್ ಹಾಕಿಕೊಂಡು ಬಿಡಿ… ಇವನ್ನು ಓದುವುದು ಮಾನಸಿಕ ಸ್ಥಿಮಿತಕ್ಕೆ ಆಘಾತಕಾರಿ ಎಂದು!
ಸುಪ್ರೀ,
ಅಯ್ಯೋ… ಅಷ್ಟು ಕಷ್ಟವಾಗುತಿದೆಯೇ ನನ್ನ ಕವನ ಓದುವುದು??
ಕ್ಷಮಿಸಿ ಹಾಗಾದರೆ, ಇನ್ನೆಂದೂ ಕವನದ ಸಹವಾಸಕ್ಕೇ ಹೋಗಲಾರೆ..
ನಿಮ್ಮ ಪ್ರೀತಿಗೂ, ಅನಿಸಿಕೆಗೂ ಥ್ಯಾಂಕ್ಸ್..
hey adigare,
tamasheyannu serious aagi tegedukollabedi… nimma kavanagalu heege saagali…
ಗುರುಗಳೇ,
ನಾನು ಸೀರಿಯಸ್ ಆಗಿದ್ದನ್ನು ನೀವೆಂದಾದರೂ ನೋಡಿರುವಿರಾ?..:)
ನನ್ನ ತುಟಿಯ ನಗುವನ್ನು ಅಳಿಸುವುದು ಅಷ್ಟು ಸುಲಭ ಅಲ್ಲ ಬಿಡಿ…:)
ಕವನಗಳು,ಬರಹಗಳು ನನ್ನ ಹಳೆಯ ನೋವುಗಳಿಗೆ ಚಿಕ್ಕ outlet ಅಷ್ಟೇ..
ನೀವಿಲ್ಲಿ ಬಂದಿದ್ದೇ ಖುಷಿ ನನಗೆ..
ಪ್ರೀತಿಯಿರಲಿ….
ಒಂದು ಹನಿ ದುಃಖ… ಈ ಬ್ಲಾಗಿನಲ್ಲಿರುವ ಅದ್ಭುತ ಕವನಗಳಲ್ಲಿ ಇದಕ್ಕೆ ಮೊದಲನೇ ಸ್ಥಾನ..:) ಇಲ್ಲಿರುವ ಬಾಷೆ ಮತ್ತೆ ಭಾವ ಎರೆಡೂ ಸೂಪರ್….ಯಾಕೊಪ ವಿರಹದ ಕವನಗಳನ್ನೆಲ್ಲ ಕೇವಲ ಹುಡುಗರೇ ಬರೀಬೇಕು ಅಂತ ದೇವರು ಶಾಪ ಹಾಕಿರೋ ಹಾಗಿದೆ….
ಥ್ಯಾಂಕ್ಸ್ ಕಣೋ..
ಹೊಸ ಕವನ ಹಾಕುತ್ತಾ ಇದ್ದ ಹಾಗೆ ನಿನ್ನ ಅಭಿಪ್ರಾಯಗಳನ್ನು ಇದೇ ಪದಗಳೊಂದಿಗೆ ತಿಳಿಸುತ್ತ ಇರು..:-)
ಇಲ್ಲಪ್ಪ. ತುಂಬ ಹುಡುಗಿಯರು ಬರೆದಿದ್ದಾರೆ. ಬಹುಃಶ ಹುಡುಗರ mindset ನಲ್ಲಿ ’ಮರೆಯುವುದು ಹುಡುಗಿಯರಿಗೆ ಸುಲಭ’ ಅನಿಸುತ್ತ ಇರುತ್ತೆ. ’ಅದಕ್ಕೆ ಅವರಿಗೆ ವಿರಹ ಜಾಸ್ತಿ ಕಾಡಲ್ವೆನೊ” ಅಂತ ಹೇಳ್ತಾ ಇರ್ತಾರೆ ಅನ್ಸುತ್ತೆ… ಅಲ್ವಾ?:-)