ಬಿರುಬಿಸಿಲಲ್ಲಿ ಹನಿಗಾಗಿ
ಧ್ಯಾನ ಮಾಡುವುದು
ಮುಸಲಧಾರೆಯೊಳಗೂ
ಹೊಂಬಿಸಿಲ ಕನಸು ಕಾಣುವುದು
ನಿನ್ನನಿಷ್ಟಪಡುವಷ್ಟು
ವಿಚಿತ್ರವೇನಲ್ಲ.
****
ತನ್ನ ಕಣ್ಣೊಳಗೇ ಇರುವ ಕವಿತೆಯ ಬಿಟ್ಟು
ಸೀರೆಯ ನೆರಿಗೆಯ
ಲಯದಲ್ಲಿ ಕಾವ್ಯ ಹುಡುಕುವ
ತರುಣರ ಕಂಡರೆ
ಅವಳಿಗೆ
ರೇಜಿಗೆ.
*****
ಮನಬೀದಿಯೊಳಗೆ
ಕಾಮಣ್ಣರು ನಿನ್ನ
ಛೇಡಿಸುತಿರುವಾಗೆಲ್ಲ
ನಾನು ನಿನ್ನ
ಪ್ರೀತಿಸಲು
ಅಯೋಗ್ಯ ಅಂತ ಆಗಾಗ್ಗೆ
ಅನಿಸುತಿರುತ್ತೆ.
****
ಚಿತ್ರ: ಇಂಟರ್ನೆಟ್ ಕೃಪೆ
Lovely neelugalu!
By the way, have you read my neelugalu?
http://www.kannada-nudi.blogspot.co.uk/search/label/%E0%B2%A8%E0%B3%80%E0%B2%B2%E0%B3%81%E0%B2%97%E0%B2%B3%E0%B3%81
ಹೌದು, ಸರ್. ಓದುತ್ತಾ ಇರ್ತೇನೆ ನೀವು ಅಪ್ಡೇಟ್ ಮಾಡಿದಾಗೆಲ್ಲಾ.
ಇತ್ತೀಚೆಗೆ ಇ-ಪುಸ್ತಕ ಕೂಡ ಓದಿದ್ದೇನೆ.
ಥ್ಯಾಂಕ್ಸ್!
ಸರ್ ತಮ್ಮ ಬಳಿ ಕೆಲವೊಂದು ವಿಚಾರ ಚರ್ಚೆ ಮಾಡೋದಿತ್ತು ಅದಕ್ಕೆ ತಮ್ಮ ಸಂಪರ್ಕಹೇಗೆ ಮಾಡುವುದು. 8904499521 ನನ್ನ ಸಂಪರ್ಕದ ವಿವರ